October 2, 2026
Friday, October 2, 2026
spot_img

ವಿದ್ಯುತ್ ತಂತಿ ತಗುಲಿ ಒಂದೂವರೆ ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮ: ಕಂಗಾಲಾದ ರೈತ

ಹೊಸದಿಗಂತ ವರದಿ ಕಲಘಟಗಿ:

ಕಲಘಟಗಿ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿನ ಕಬ್ಬಿನ ಹೊಲಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ ಸುಮಾರು ಒಂದೂವರೆ ಎಕರೆ ಕಬ್ಬಿನ ಬೆಳೆ ಸುಟ್ಟುಹೋದ ಘಟನೆ ನಡೆದಿದೆ.

ತುಮರಿಕೊಪ್ಪ ಗ್ರಾಮದ ರೈತ ಶಂಕ್ರಪ್ಪ ಕೆಲಗೇರಿ ಎಂಬುವವರಿಗೆ ಸೇರಿದ ಒಂದೂವರೆ ಎಕರೆ ಹೊಲಕ್ಕೆ ಮದ್ಯಾಹ್ನ ವೇಳೆ ಏಕಾಏಕಿ ಬೆಂಕಿ ತಗುಲಿದೆ. ಕೂಡಲೆ ಘಟನಾ ಸ್ಥಳಕ್ಕೆ ಗ್ರಾಮದ ರೈತರು ನುಗ್ಗಿ, ಬೆಂಕಿ ನಂದಿಸಿ ಅಕ್ಕ ಪಕ್ಕದ ಹೊಲಗಳಿಗೆ ಬೆಂಕಿ ಹೋಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಮೊದಲನೇ ಕುಳೆ ಕಬ್ಬು ಇದಾಗಿರುವುದರಿಂದ ರೈತ ಅತಿಯಾದ ನಷ್ಟ ಅನುಭವಿಸುವಂತಾಗಿದೆ.

Must Read