ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸಾರಿಗೆ ವ್ಯವಸ್ಥೆಯಲ್ಲಿ ಇಂದು ಸಂಚಲನ ಮೂಡಿದೆ. ಬರೋಬ್ಬರಿ 38 ತಿಂಗಳ ಬಾಕಿ ವೇತನ ಪಾವತಿಗೆ ಆಗ್ರಹಿಸಿ ಸಿಬ್ಬಂದಿಗಳು ‘ಬೆಂಗಳೂರು ಚಲೋ’ ಚಳುವಳಿಗೆ ಮುಂದಾಗಿದ್ದಾರೆ.
ಮುಷ್ಕರ ನಿರತರನ್ನು ಸಮಾಧಾನಪಡಿಸಲು ಸರ್ಕಾರವು 26 ತಿಂಗಳ ಹಣ ನೀಡುವುದಾಗಿ ಭರವಸೆ ನೀಡಿದರೂ, ಪಟ್ಟು ಬಿಡದ ನೌಕರರು ಪೂರ್ಣ ಪಾವತಿಗೇ ಪಟ್ಟು ಹಿಡಿದು ಪ್ರತಿಭಟನೆ ಹಾದಿ ಹಿಡಿದಿದ್ದಾರೆ.
ಪ್ರಸ್ತುತ ನಗರದ ರಸ್ತೆಗಳಲ್ಲಿ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ವಾಹನಗಳು ಎಂದಿನಂತೆ ಚಲಿಸುತ್ತಿವೆ. ಮೆಜೆಸ್ಟಿಕ್ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ವಾಹನಗಳ ಓಡಾಟಕ್ಕೆ ಸದ್ಯಕ್ಕೆ ಯಾವುದೇ ಅಡೆತಡೆ ಉಂಟಾಗಿಲ್ಲ. ಆದಾಗ್ಯೂ, ಪ್ರತಿಭಟನೆಯ ಆತಂಕದಿಂದಾಗಿ ಜನಸಾಮಾನ್ಯರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮವಾಗಿ, ಬಸ್‌ಗಳಿದ್ದರೂ ಪ್ರಯಾಣಿಕರಿಲ್ಲದೆ ನಿಲ್ದಾಣಗಳು ಬಿಕೋ ಎನ್ನುತ್ತಿವೆ.



