February 19, 2026
Thursday, February 19, 2026
spot_img

10ನೇ ಕ್ಲಾಸ್ ಎಕ್ಸಾಂಗೆ ವೈಭವ್ ಸೂರ್ಯವಂಶಿ ಚಕ್ಕರ್: ಕೊನೆಗೂ ಮೌನ ಮುರಿದ ತಂದೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಸಿಸಿ ಅಂಡರ್-19 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ವೈಭವ್ ಸೂರ್ಯವಂಶಿ ಇದೇ ಫೆಬ್ರವರಿ 17ರಿಂದ ಆರಂಭವಾಗುವ ಸಿಬಿಎಸ್‌ಇ ಪರೀಕ್ಷೆ ಬರೆಯಲು ರೆಡಿಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇತ್ತ ವೈಭವ್ ಓದುವ ಶಾಲಾ ಸಿಬ್ಬಂದಿಗಳು ಈಗಾಗಲೇ ಹಾಲ್‌ ಟಿಕೆಟ್ ವೈಭವ್ ಅವರಿಗೆ ತಲುಪಿದೆ ಎಂದು ಹೇಳಿದ್ದರು.

ಹೀಗಿರುವಾಗಲೇ 10ನೇ ತರಗತಿ ಪರೀಕ್ಷೆ ಬರೆಯಲು ಕೇವಲ ಒಂದು ದಿನ ಬಾಕಿ ಇರುವಾಗ ವೈಭವ್ ಸೂರ್ಯವಂಶಿ 10ನೇ ತರಗತಿ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ.
ಫೆಬ್ರವರಿ 17ರಂದು ನಡೆದ ಪರೀಕ್ಷೆಯಲ್ಲಿ ವೈಭವ್ ಪಾಲ್ಗೊಂಡಿಲ್ಲ. ಹೀಗಾಗಿ ನಿಯಮಾನುಸಾರ ಅವರು ಗೈರಾಗಿದ್ದಾರೆ ಎಂದು ದಾಖಲೆಯಲ್ಲಿ ನಮೂದಿಸಲಾಗಿದೆ ಎಂದು ಪ್ರಿನ್ಸಿಪಾಲ್ ಎನ್‌.ಕೆ ಸಿನ್ಹಾ ತಿಳಿಸಿದ್ದರು.

ಇದೀಗ ಈ ವಿಚಾರವಾಗಿ ವೈಭವ್ ತಂದೆ ಸಂಜೀವ್ ಮೌನ ಮುರಿದಿದ್ದು, ‘ನಮ್ಮ ಮಗ ನಾಗ್ಪುರದಲ್ಲಿ ಐಪಿಎಲ್ ತಂಡವಾದ ರಾಜಸ್ಥಾನ ರಾಯಲ್ಸ್ ಆಟಗಾರರ ಜತೆ ಪ್ರಾಕ್ಟೀಸ್ ಮಾಡುತ್ತಿದ್ದಾನೆ. ಈ ವರ್ಷ ವೈಭವ್ ಎಕ್ಸಾಂ ಬರೆಯುವುದರ ಬಗ್ಗೆ ಎಲ್ಲಾ ಕಡೆ ದೊಡ್ಡದಾಗಿ ಬಿಂಬಿಸಲಾಗಿದೆ. ಹೀಗಾಗಿ ಈ ಬಾರಿ ಎಕ್ಸಾಂಗೆ ಗೈರಾಗಿ ಮುಂದಿನ ವರ್ಷ ಪರೀಕ್ಷೆ ಬರೆಯಲು ತೀರ್ಮಾನಿಸಿದ್ದಾನೆ’ ಎಂದು ತಿಳಿಸಿದ್ದಾರೆ.

ಈ ಬಾರಿ ಎಕ್ಸಾಂ ಬರೆದರೂ ಹೆಚ್ಚು ಏಕಾಗ್ರತೆಯಿಂದ ಇರಲು ಸಾಧ್ಯವಾಗುವುದಿಲ್ಲ. ವೈಭವ್ ಶಾಲೆಗೆ ಹೋಗುವಾಗ ತುಂಬಾ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ. ಆತ ಶಾಲೆಗೆ ಹೋಗುವಾಗ ಎಲ್ಲಾ ವಿಷಯದಲ್ಲೂ 90+ ಸ್ಕೋರ್ ಮಾಡುತ್ತಿದ್ದ. ಆದರೆ ಈಗ ಆತನ ಸದ್ಯದ ಟಾರ್ಗೆಟ್ ಕ್ರಿಕೆಟ್ ಮೇಲಿದೆ. ಮುಂದಿನ ವರ್ಷ ಖಂಡಿತ ಆತ 10ನೇ ತರಗತಿ ಪರೀಕ್ಷೆ ಬರೆಯುತ್ತಾನೆ ಎಂದು ವೈಭವ್ ತಂದೆ ಹೇಳಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !