February 19, 2026
Thursday, February 19, 2026
spot_img

ಕೊನೆಯ ಮಾವೋವಾದಿ ಶರಣಾಗತಿ: ಬಿಹಾರ ಇನ್ಮುಂದೆ ನಕ್ಸಲ್​ ಮುಕ್ತ ರಾಜ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯುಎಪಿಎ ಸೇರಿದಂತೆ 60 ಪ್ರಕರಣಗಳನ್ನು ಹೊಂದಿದ್ದ, 3 ಲಕ್ಷ ರೂ ಬಹುಮಾನ ಘೋಷಿತ ಮಾವೋವಾದಿ ಸುರೇಶ್​ ಕೊಡಾ ಅಲಿಯಾಸ್​ ಮುಸ್ತಕಿಮ್​ ಶರಣಾಗಿದ್ದು, ಈ ಮೂಲಕ ಬಿಹಾರ ರಾಜ್ಯ ನಕ್ಸಲ್​ ಮುಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಪ್ರಕಟಿಸಿರುವ ಪೊಲೀಸ್​ ಮುಖ್ಯ ಕಚೇರಿ,ಮುಂಗೇರ್‌​ ಜಿಲ್ಲೆಯ ಸ್ಪೆಷಲ್​ ಟಾಸ್ಕ್​ ಫೋರ್ಸ್​ ಮುಂದೆ ಕೊಡಾ ಶರಣಾಗತನಾಗಿದ್ದಾನೆ. ತನ್ನ ಬಳಿ ಇದ್ದ ಮೂರು ರೈಫಲ್​, ನೂರಾರು ಮದ್ದುಗುಂಡು ಮತ್ತು ಮ್ಯಾಗಜೀನ್​ ಹಾಗೂ ಸ್ವಲ್ಪ ಹಣವನ್ನು ಆತ ಪೊಲೀಸರಿಗೆ ಒಪ್ಪಿಸಿದ್ದಾನೆ ಎಂದು ತಿಳಿಸಿದ್ದಾರೆ.

ಕೊಡಾಗೆ ಆತ್ಮಸಮರ್ಪಣೆ ಶಾ ಪುನರ್ವಾಸ ಯೋಜನೆ ಅಡಿ ಎಲ್ಲಾ ಪ್ರಯೋಜನಗಳನ್ನು ನೀಡಲಾಗುವುದು. ಈ ಯೋಜನೆ ಅಡಿ ಈತನ ತಲೆಗೆ ಘೋಷಿಸಿದ್ದ ಬಹುಮಾನದಷ್ಟೇ ಮೊತ್ತವನ್ನು ಪುನರ್ವಸತಿ ಯೋಜನೆ ಭಾಗವಾಗಿ 3 ಲಕ್ಷ ರೂ ಹಣ ಪಡೆಯುತ್ತಾನೆ. ಇದರ ಜೊತೆಗೆ 5 ಲಕ್ಷ ಪ್ರೋತ್ಸಾಹಧನ ಮತ್ತು 36 ತಿಂಗಳ ಕಾಲ 10 ಸಾವಿರ ಸ್ಟೈಫಂಡ್​ ಹಣ ಪಡೆಯಲಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಡಾ ಶರಣಾಗತಿಯೊಂದಿಗೆ ಬಿಹಾರದಲ್ಲಿನ ನಕ್ಸಲ್​ ತಾಣಗಳು ಸಂಪೂರ್ಣವಾಗಿ ನಾಶವಾಗಿವೆ . ರಾಜ್ಯವು ನಕ್ಸಲ್​ ಮುಕ್ತವಾಗಿದೆ ಎಂದು ಘೋಷಿಸಿದ್ದಾರೆ.

2012ರಲ್ಲಿ ಬಿಹಾರದ 23 ಜಿಲ್ಲೆಗಳಲ್ಲಿ ನಕ್ಸಲ್​ ಚಟುವಟಿಕೆ ವಿಪರೀತವಾಗಿತ್ತು. ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುಸ್ಥಿರ ಪ್ರಯತ್ನದಿಂದಾಗಿ 2025 ರಲ್ಲಿ ಯಾವುದೇ ಒಂದು ನಕ್ಸಲ್​ ಘಟನೆಗಳು ವರದಿಯಾಗಿರಲಿಲ್ಲ. 220 ನಕ್ಸಲರನ್ನು ಬಂಧಿಸಲಾಗಿತ್ತು. ರಾಜ್ಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಇದರ ಪರಿಣಾಮ ರಾಜ್ಯವು ನಕ್ಸಲ್​ ಮುಕ್ತವಾಗಿದೆ ಎಂದು ತಿಳಿದು ಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !