ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಎಂಎಂ ಬೇಗ್ ನಿಗೂಢವಾಗಿ ಸಾವನ್ನಪ್ಪಿದ್ದಾರೆ.
ಬೇಗ್ ಸ್ವಲ್ಪ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಇದೀಗ ಅವರ ಮನೆಯಲ್ಲೇ ಅವರ ಹೀನಾಯ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು.
4 ರಿಂದ 5 ದಿನಗಳಿಂದ ಮನೆಯಿಂದ ಹೊರಗೆ ಬಾರದ ಕಾರಣ, ನೆರೆಹೊರೆಯವರು ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ದೂರು ನೀಡಿದ್ದು, ಇದರ ಬೆನ್ನಲ್ಲೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಬಲವಂತವಾಗಿ ಬಾಗಿಲು ತೆರೆದಾಗ ಅಲ್ಲಿ ಬೇಗ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಬೇಗ್ ತಮ್ಮ ವೃತ್ತಿಜೀವನವನ್ನು ಜೆ ಓಂ ಪ್ರಕಾಶ್, ವಿಮಲ್ ಕುಮಾರ್ ಮತ್ತು ರಾಕೇಶ್ ರೋಷನ್ ಅವರಿಗೆ ಗೋವಿಂದ ಕೆ ಆದ್ಮಿ ಖಿಲೋನಾ ಹೈ, ಜೈಸಿ ಕರ್ನಿ ವೈಸಿ ಭರ್ನಿ, ಮತ್ತು ಕರ್ಜ್ ಚುಕಾನಾ ಹೈ, ಅನಿಲ್ ಕಪೂರ್-ನಟನೆಯ ಕಾಲಾ ಬಜಾರ್ ಮತ್ತು ಕಿಶನ್ ಕನ್ಹಯ್ಯಾ ಮುಂತಾದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದರು.
ಬೇಗ್ ಸಾಹಬ್ ಅವರು ರಾಕೇಶ್ ರೋಷನ್ ಸಾಹಬ್ ಅವರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಅವರು ಹೃತಿಕ್ ರೋಷನ್ ಅವರಿಗೆ ವಾಕ್ಚಾತುರ್ಯ, ಧ್ವನಿ ಮಾಡ್ಯುಲೇಷನ್ ಮತ್ತು ಸಂಭಾಷಣೆಗಳಲ್ಲಿ ಸಹಾಯ ಮಾಡಿದ್ದರು. ಏಕೆಂದರೆ ಅವರು ಈ ವಿಷಯಗಳನ್ನು ಚೆನ್ನಾಗಿ ತಿಳಿದಿದ್ದರು. ಬೇಗ್ ಸಾಹಬ್ ಹೃತಿಕ್ ರೋಷನ್ ಗೆ ಸಂಭಾಷಣೆಗಳನ್ನು ಹೇಳಲು ಸಹಾಯ ಮಾಡಿದ್ದರು. ಬಳಿಕ ತಮ್ಮ ಚೊಚ್ಚಲ ಚಿತ್ರ ಕಹೋ ನಾ ಪ್ಯಾರ್ ಹೈ ನಿರ್ದೇಶಿಸಿದ್ದರು.



