March 14, 2026
Saturday, March 14, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ಖುಷಿಯ ದಿನ, ಕೆಲಸದಲ್ಲಿ ಶ್ಲಾಘನೆ

ಮೇಷ
ನಿಮ್ಮ ಸುತ್ತ ನಯವಂಚಕರಿದ್ದಾರೆ, ಎಚ್ಚರವಿರಿ. ಅಧಿಕ ಒತ್ತಡದ  ಕಾರಣ  ಮಾನಸಿಕ ಬಳಲಿಕೆ. ಇದು ದೇಹದ ಮೇಲೂ ಪರಿಣಾಮ ಬೀರಲಿದೆ.
ವೃಷಭ
ಕೆಲಸದ ಮೇಲೆ ಏಕಾಗ್ರತೆ ಮೂಡದು. ಹೊಸ ಸಮಸ್ಯೆಯೇ ತಲೆ ಕೊರೆಯುವುದು. ಕಾದು ನೋಡಿ, ಪರಿಹಾರ ಗೋಚರಿಸಲಿದೆ.      
ಮಿಥುನ
ಮುಂಜಾನೆ ಉದ್ವಿಗ್ನ ಮನಸ್ಥಿತಿ. ಅಪರಾಹ್ನದ ವೇಳೆ ಎಲ್ಲವೂ ನಿರಾಳ.  ಚಿಂತೆಗೆ  ಕಾರಣವಾದ ವಿಷಯ ಇತ್ಯರ್ಥ. ಭಾವನಾತ್ಮಕ ಏರುಪೇರು.  
ಕಟಕ
ನಿಮ್ಮ ಕಾರ್ಯಶೈಲಿ ಇತರರಿಗೆ ಮಾದರಿ. ಆದರೂ ವೃತ್ತಿಕ್ಷೇತ್ರದಲ್ಲಿ ಪ್ರತಿಕೂಲ ಪರಿಸ್ಥಿತಿ. ತಪ್ಪಿಗೆ ಅವಕಾಶ ಕೊಡಬೇಡಿ.         ಎಚ್ಚರದಿಂದಿರಿ.
ಸಿಂಹ
ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಕೆ ಶ್ಲಾಘನೆ. ಕಠಿಣ ಕಾರ್ಯವೂ ನಿಮ್ಮಿಂದ ಸುಲಭವಾಗಲಿದೆ. ಮನೆಯಲ್ಲೂ ಹರ್ಷದ ವಾತಾವರಣ.  
ಕನ್ಯಾ
ಸ್ಪರ್ಧಾತ್ಮಕ ವಾತಾವರಣದಲ್ಲಿ ಚಡಪಡಿಸುವಿರಿ. ಸವಾಲಿಗೆ ಮುದುಡದಿರಿ. ಸೂಕ್ತ ಸಹಕಾರ, ನೆರವು ನಿಮಗೆ ಸಿಕ್ಕಿಯೇ ಸಿಗುವುದು.  
ತುಲಾ
ಅನುಚಿತ ಮಾತಿನಿಂದ ಬಿಕ್ಕಟ್ಟಿಗೆ ಸಿಲುಕುವಿರಿ. ನಿಯಂತ್ರಣ ಇರಲಿ. ವೃತ್ತಿಯಲ್ಲಿ ಪ್ರತಿಕೂಲ ಪರಿಸ್ಥಿತಿ. ಒತ್ತಡ, ಹೊಣೆ ಅಧಿಕ.    
ವೃಶ್ಚಿಕ
ನಿಮ್ಮ ಕಾರ್ಯಶೈಲಿ ಬದಲಿಸಬೇಕು. ಇಲ್ಲವಾದರೆ ಪ್ರಗತಿ ಕುಂಠಿತ. ಆತ್ಮೀಯರೆ ನಿಮ್ಮ ವಿರುದ್ಧ ತಿರುಗಿ ಬಿದ್ದಾರು. ದೃಢ ಮನಸ್ಕರಾಗಿರಿ. ಧನು
ಎಂದಿನಂತಿಲ್ಲ ಇಂದು. ಕೆಲಸದಲ್ಲಿ  ಮನಸ್ಸು ನಿಲ್ಲದು. ಏನೇನೋ ಚಿಂತೆಗಳು. ಮೋಸ ಮಾಡುವ ವ್ಯಕ್ತಿಗಳ ಬಗ್ಗೆ ಎಚ್ಚರವಿರಲಿ.      
ಮಕರ
ಹೊಸ ವ್ಯವಹಾರಕ್ಕೆ ಕೈಹಾಕಲು ಯೋಜಿಸಿದ್ದರೆ ಇನ್ನೊಮ್ಮೆ ಯೋಚಿಸಿ. ಅಡ್ಡಿ ನಿವಾರಿಸಿಕೊಳ್ಳಿ. ಆತ್ಮೀಯರೇ ವಿರೋಧ ಸೂಚಿಸಬಹುದು.   ಕುಂಭ
ಆರೋಗ್ಯ ಸಮಸ್ಯೆ, ಮನಸ್ಸಿಗೆ ಉದಾಸ ಭಾವ. ಆಹಾರದಲ್ಲಿ ಎಚ್ಚರ ವಹಿಸಿ. ಅಜೀರ್ಣ ಸಮಸ್ಯೆ ಬಾಧಿಸಬಹುದು. ವೃತ್ತಿಯಲ್ಲಿ ಒತ್ತಡ ಹೆಚ್ಚು.
ಮೀನ
ಸಂವಹನ ಕೊರತೆ, ಬಾಂಧವ್ಯದಲ್ಲಿ ಬಿಕ್ಕಟ್ಟು. ಕಾರ್ಯ ವಿಳಂಬ. ತಪ್ಪಿನಿಂದ ಪಾಠ ಕಲಿಯಿರಿ, ಅದನ್ನೆ ಪುನರಾವರ್ತನೆ ಮಾಡಬೇಡಿ.  

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !