ದಿನಭವಿಷ್ಯ
ಮೇಷ
ಹಣಕಾಸಿನ ವಿಷಯದಲ್ಲಿ ಸೂಕ್ತ ಯೋಜನೆ ಅವಶ್ಯ.ಇಲ್ಲವಾದರೆ ಆರ್ಥಿಕ ಏರುಪೇರು. ಅನವಶ್ಯ ಖರ್ಚು ನಿಯಂತ್ರಿಸಿ. ಕೌಟುಂಬಿಕ ಕಾರ್ಯಕ್ರಮ ಹೆಚ್ಚು.
ವೃಷಭ
ನಿರಂತರ ದುಡಿಮೆ ನಿಮ್ಮನ್ನು ಸುಸ್ತಾಗಿಸು ತ್ತದೆ. ತುಸುವಿರಾಮ ಪಡೆದುಕೊಳ್ಳಿರಿ. ದುಡಿಮೆಗಿಂತ ಹೊರತಾದ ಬದುಕನ್ನೂ ನೋಡಿರಿ.
ಮಿಥುನ
ಪ್ರೀತಿ ನಿಮ್ಮ ಪಾಲಿಗೆ ಕುಶಿ ಕೊಡುವ ವಿಚಾರ. ಅದನ್ನು ಇಂದು ಅನುಭವಿಸುವಿರಿ. ಪ್ರೀತಿಪಾತ್ರರ ಸಂಗದಲ್ಲಿ ಸಂತೋಷ. ಮನಸ್ಸು ನಿರಾಳ.
ಕಟಕ
ಕಾಲ ಯಾರಿಗೂ ಕಾಯುವುದಿಲ್ಲ. ಹಳೆಯ ದಿನಗಳ ಗುಂಗಿನಲ್ಲಿ ಇಂದಿನ ಕೆಲಸ ಮರೆಯಬೇಡಿ. ಈ ವಿಷಯ ನೀವು ನೆನಪಿಟ್ಟುಕೊಳ್ಳಬೇಕು.
ಸಿಂಹ
ನಿಮ್ಮ ಕ್ರಿಯಾಶೀಲತೆ ಇಂದು ಉನ್ನತ ಮಟ್ಟದಲ್ಲಿರುತ್ತದೆ. ಖಾಸಗಿ ಮತ್ತು ವೃತ್ತಿ ಬದುಕೆರಡರಲ್ಲೂ ಇದು ತೋರಿಬರಲಿದೆ. ಕೌಟುಂಬಿಕ ಸಂತಸ.
ಕನ್ಯಾ
ನೀವು ಉನ್ನತ ಸ್ಥಿತಿಗೆ ಏರಬೇಕಾದರೆ ನಿಮ್ಮ ಭಾವನೆಯನ್ನು ನಿಯಂತ್ರಿಸುವುದು ಅವಶ್ಯ. ಭಾವುಕತೆ ನಿಮ್ಮ ಭವಿಷ್ಯಕ್ಕೆ ಮುಳುವಾಗ ಬಹುದು.
ತುಲಾ
ನೀವಿಂದು ರೋಷದಿಂದ ಸಿಡಿದೇಳುವ ಪರಿಸ್ಥಿತಿ ಉದ್ಭವಿಸಬಹುದು. ಅಪರಾಹ್ನ ಉದ್ಯಮಕ್ಕೆ ಸಂಬಂಸಿ ಪ್ರಮುಖ ಬೆಳವಣಿಗೆ. ಕೋಪತಾಪ ನಿಯಂತ್ರಿಸಿಕೊಳ್ಳಿ.
ವೃಶ್ಚಿಕ
ಕುಟುಂಬ ಸದಸ್ಯರ ಜತೆ ಸಂತೋಷದ ಕಾಲಕ್ಷೇಪ. ನಿಮ್ಮ ಜೀವನಶೈಲಿ ಬದಲಿಸಬೇಕಾಗಬಹುದು. ಮುಖ್ಯವಾಗಿ ಆಹಾರ ಸೇವನೆ ಹಿತಮಿತವಾಗಿರಲಿ.
ಧನು
ಹಿರಿಯರೊಬ್ಬರ ಹಿತನುಡಿ ನಿಮಗೆ ವರದಾನವಾಗ ಬಹುದು. ನಿಮ್ಮ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದು. ಕೌಟುಂಬಿಕ ಶಾಂತಿ.
ಮಕರ
ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ವ್ಯಸ್ತರಾಗುವ ಪ್ರಸಂಗ. ಬಂಧುಮಿತ್ರರ ಭೇಟಿ. ವೃತ್ತಿಯಲ್ಲಿ ಅನಪೇಕ್ಷಿತ ಬೆಳವಣಿಗೆಯಿಂದ ಉದ್ವಿಗ್ನತೆ.
ಕುಂಭ
ಇಂದಿನದು ವಿಶೇಷ ದಿನ. ಯಾವುದೂ ನಿಮ್ಮ ಇಷ್ಟಕ್ಕೆ ವಿರೋಧವಾಗಿ ಸಾಗುವುದಿಲ್ಲ. ಬಯಸಿದ ಬೆಳವಣಿಗೆ ಸಂಭವಿಸುತ್ತದೆ. ಧನ ಲಾಭ.
ಮೀನ
ಇಂದು ನೀವು ನಿಮಗೆ ಇಷ್ಟವಾದ ಕಾರ್ಯವನ್ನಷ್ಟೆ ಮಾಡಲು ಬಯಸುವಿರಿ. ಇತರ ಕೆಲಸಗಳನ್ನು ಕಡೆಗಣಿಸುವಿರಿ.