February 20, 2026
Friday, February 20, 2026
spot_img

ರಾಜಕೀಯಕ್ಕೆ ಎಂಟ್ರಿಕೊಟ್ಟ ಬಿಗ್ ಬಾಸ್ ವಿನ್ನರ್: ಯಾರು? ಯಾವ ಪಾರ್ಟಿ? ಇಲ್ಲಿದೆ ಮಾಹಿತಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಿಗ್ ಬಾಸ್ ಟ್ರೋಫಿ ಗೆದ್ದ ಸ್ಪರ್ಧಿ ರಾಜಕೀಯಕ್ಕೆ ಎಂಟ್ರಿಕೊಟ್ಟಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಮಿತ್ರ ಪಕ್ಷ ಸೇರಿಕೊಂಡಿದ್ದಾರೆ.

ಹೌದು, ಕೇರಳದಬಿಗ್ ಬಾಸ್ ಮಲೆಯಾಳಂ 5ನೇ ಆವೃತ್ತಿ ಗೆದ್ದ ಅಖಿಲ್ ಮಾರಾರ್ ಇದೀಗ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದಾರೆ. ಎನ್‌ಡಿಎ ಮಿತ್ರಪಕ್ಷವಾಗಿರುವ ಕೇರಳದ ಟ್ವೆಂಟಿ20 ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಟ್ವೆಂಟಿ20 ಪಕ್ಷದ ಚೀಫ್ ಕೋಆರ್ಡಿನೇಟರ್ ಸಾಬು ಎಂ. ಜೇಕಬ್ ಜೊತೆ ಈ ಘೋಷಣೆ ಮಾಡಿದ್ದಾರೆ.

ಟ್ವೆಂಟಿ20 ಪಕ್ಷಕ್ಕೆ ಅನೇಕ ಪ್ರತಿಭಾವಂತರು ಸೇರುತ್ತಿದ್ದು, ಅಖಿಲ್ ಮಾರಾರ್ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬುದನ್ನು ಎನ್‌ಡಿಎ ನಾಯಕತ್ವ ನಿರ್ಧರಿಸಲಿದೆ ಎಂದು ಹೇಳಿದರು.

ಬಿಗ್ ಬಾಸ್ ವಿನ್ನರ್ ಅಖಿಲ್ ಮಾರಾರ್ , ನಾನೊಬ್ಬ ಸ್ವತಂತ್ರ ಚಿಂತನೆಯುಳ್ಳ ವ್ಯಕ್ತಿ. ಕೇರಳದಲ್ಲಿ ಆಡಳಿತ ಬದಲಾಗಬೇಕು ಎಂಬುದು ನನ್ನ ನಿಲುವಾಗಿತ್ತು ಎಂದಿದ್ದಾರೆ.

ಅಖಿಲ್ ಮಾರಾರ್ ಅವರು ಕೊಲ್ಲಂ ಜಿಲ್ಲೆಯ ಒಂದು ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಅವರು ಕೊಟ್ಟಾರಕ್ಕರ ಕ್ಷೇತ್ರದಿಂದ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. ಈ ಹಿಂದೆ ಟ್ವೆಂಟಿ20 ನಾಯಕರೊಂದಿಗೆ ಚರ್ಚೆ ನಡೆಸಿರುವುದಾಗಿ ಅಖಿಲ್ ಖಚಿತಪಡಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !