February 20, 2026
Friday, February 20, 2026
spot_img

ಹನಿ ಬಿದ್ದ ಜಾಗದಲ್ಲಿ ನಿಗೂಢ ಹಳದಿ ಚುಕ್ಕೆಗಳು: ಕಡಬದ ಜನತೆಗೆ ಶಾಕ್ ನೀಡಿದ ಮೊದಲ ಮಳೆ!

ಹೊಸ ದಿಗಂತ ವರದಿ, ಕಡಬ :

ಕಡಬ ತಾಲೂಕಿನ ಕೊಂಬಾರು–ಸಿರಿಬಾಗಿಲು, ಕೈಕಂಬ ಪ್ರದೇಶದಲ್ಲಿ ಗುರುವಾರ ರಾತ್ರಿ ತುಂತುರು ಮಳೆಯಾಗಿದ್ದು, ಬೆಳಿಗ್ಗೆ ಈ ಮಳೆಹನಿಗಳು ಬಿದ್ದ ಜಾಗಗಳಲ್ಲಿ ಹಳದಿ ಚುಕ್ಕಿಗಳು ಕಂಡು ಬಂದಿದೆ.

ರಾತ್ರಿ ಮಳೆಯಾದಾಗ ಯಾರೂ ಗಮನಿಸಿರಲಿಲ್ಲ. ಆದರೆ ಬೆಳಿಗ್ಗೆ ನೋಡಿದಾಗ ಮನೆಯ ಅಂಗಳ, ಗಿಡಗಳು ಹಾಗೂ ಒಣ ಹಾಕಿದ ಬಟ್ಟೆಗಳ ಮೇಲೆ ಹಳದಿ ಬಣ್ಣದ ಚುಕ್ಕಿಗಳು ಕಂಡುಬಂದಿವೆ.ಈ ಚುಕ್ಕಿಗಳು ಒಣಗಿದ ನಂತರ ಹತ್ತಿಯಿಂದ ತೆಗೆಯುವಾಗ ಹಳದಿ ಹುಡಿಯಂತೆ ಕಂಡು ಬಂದಿದೆ.

ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಜನ ಪರಿಶೀಲಿಸಿದಾಗ ಹಳದಿ ಕಲೆಗಳು ಕಂಡುಬಂದಿವೆ. ವಿಷಯ ತಿಳಿದ ಕಂದಾಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಳದಿ ಬಣ್ಣದ ಮಾದರಿಯನ್ನು ಸಂಗ್ರಹಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !