February 21, 2026
Saturday, February 21, 2026
spot_img

ದಿನಭವಿಷ್ಯ: ಬಾಕಿ ಉಳಿದ ಕಾರ್ಯ ಪೂರೈಸಿರಿ, ಕೆಲಸದ ಒತ್ತಡದಿಂದ ಮುಕ್ತಿ

ಮೇಷ
ಕೆಲವು ಅನಿರೀಕ್ಷಿತ ಗುರಿ ಸಾಧಿಸಬೇಕಾಗುತ್ತದೆ. ಚಿಂತೆಗೆ ಕಾರಣವಿಲ್ಲ. ನಿಮ್ಮಿಂದ ಸುಲಭದಲ್ಲೇ ಸಾಧ್ಯವಾಗಲಿದೆ. ಬಂಧು ಭೇಟಿ. ಆರ್ಥಿಕ ಸ್ಥಿರತೆ.
ವೃಷಭ
ಬಾಕಿ ಉಳಿದ ಕಾರ್ಯ ಪೂರೈಸಿರಿ. ಸಂಜೆ ವೇಳೆ ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ಪ್ರೇಮಿಗಳ ಮಧ್ಯೆ ಒಡಕು ಉಂಟಾದೀತು.
ಮಿಥುನ
ಕೆಲವು ಪುಟ್ಟ ಬದಲಾವಣೆ ಮಾಡಿಕೊಳ್ಳಿ. ಆರೋಗ್ಯಪೂರ್ಣ ಮತ್ತು ಸಂತಸದ ಬದುಕು ಸಾಧ್ಯ. ದೊಡ್ಡ ಮಟ್ಟದ ವೆಚ್ಚಕ್ಕೆ ಕೈಹಾಕಬೇಡಿ.
ಕಟಕ
ಕೆಲಸದ ಒತ್ತಡದಿಂದ ಮುಕ್ತಿ. ನಿಮ್ಮ ಇಷ್ಟದ ಕಾರ್ಯ ನಡೆಸಲು ಅವಕಾಶ. ಧನಲಾಭ. ಅತಿ ಆಹಾರ ಸೇವನೆ ಜಡತ್ವಕ್ಕೆ ಕಾರಣವಾದೀತು.
ಸಿಂಹ
ಎಲ್ಲರು ಮೆಚ್ಚುವ ಸಾಧನೆ ನಿಮ್ಮದು. ಅಶಾಂತಿ ಪರಿಹಾರ. ಕಠಿಣ ಕಾರ್ಯ ಸುಲಭದಲ್ಲಿ ಪೂರ್ಣ. ಹೊಸ ಹೊಣೆಗಾರಿಕೆ ಈಗ ಹೊತ್ತುಕೊಳ್ಳದಿರಿ.
ಕನ್ಯಾ
ಮನಸ್ಸೇಕೋ ಉದಾಸ. ಎಲ್ಲರ ಜತೆ ಬೆರೆಯಲು ಮನಸ್ಸು ಬಾರದು. ಕಾರಣವಿಲ್ಲದ ಚಿಂತೆ. ಕೆಲವರಿಗೆ ಹೊಟ್ಟೆ ನೋವು ಕಾಡಬಹುದು.
ತುಲಾ
ಪ್ರಮುಖ ನಿರ್ಧಾರ ತಾಳಬೇಕಾದ ದಿನ. ಮನದಲ್ಲಿ ಶಾಂತತೆ ಕಾಯ್ದುಕೊಳ್ಳಿ. ಒತ್ತಡಗಳು ಪ್ರಭಾವಿಸದಂತೆ ನೋಡಿ. ದೈಹಿಕ ನೋವು ಸಂಭವ.
ವೃಶ್ಚಿಕ
ಪ್ರೀತಿಯ ಬದುಕು ಅಥವಾ ಕೌಟುಂಬಿಕ ಪರಿಸರ ಸಕಾರಾತ್ಮಕ ಬದಲಾವಣೆ ಕಾಣಲಿದೆ. ಸಮಸ್ಯೆ ನಿವಾರಣೆ. ಬಂಧುಗಳ ಸಹಕಾರ.
ಧನು
ಕೆಲ ವಿಚಾರಗಳಲ್ಲಿ ಗೊಂದಲದ ಮನಸ್ಥಿತಿ. ಸ್ಪಷ್ಟತೆ ಕಾಣದೆ ತೊಳಲಾಟ. ವಿವೇಕದಿಂದ ವರ್ತಿಸಿ, ಇತರರನ್ನು ನಿಯಂತ್ರಿಸಲು ಹೋಗದಿರಿ.
ಮಕರ
ವೃತ್ತಿಯಲ್ಲಿ ಹೆಚ್ಚು ಎಚ್ಚರದಿಂದಿರಿ. ಪ್ರತಿಕೂಲ ಸನ್ನಿವೇಶ ಎದುರಾದೀತು. ಇದರ ಮಧ್ಯೆಯೇ ಆರ್ಥಿಕ ಉನ್ನತಿ. ಮುಖ್ಯ ಯೋಜನೆ ಯಶಸ್ಸು.
ಕುಂಭ
ಇಂದು ನಿಮ್ಮ ಸುತ್ತಲಿನ ಪರಿಸರ ಗಂಭೀರ ಎನಿಸಲಿದೆ. ನೀವೂ ಅದಕ್ಕೆ ಹೊಂದಿಕೊಳ್ಳಿ. ಕೆಲಸದಲ್ಲಿ ಭಾರೀ ಒತ್ತಡ. ಇತರರ ಅಸಹಕಾರ ಎದುರಿಸುವಿರಿ.
ಮೀನ
ಏರುಪೇರಿನ ದಿನ. ಸಂತೋಷ, ಬೇಸರ ಎರಡೂ ಅನುಭವಿಸುವಿರಿ. ಪ್ರೀತಿಗೆ ಅಡ್ಡಿ. ಒತ್ತಡ ಕಳೆಯಲು ಸಂಗೀತ, ಅಧ್ಯಾತ್ಮ ನೆರವಾದೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !