April 8, 2026
Wednesday, April 8, 2026
spot_img

CINE | ‘ಟಾಕ್ಸಿಕ್’ನಲ್ಲಿ ರುಕ್ಮಿಣಿ–ಯಶ್ ಜೋಡಿ ಬಗ್ಗೆ ಚೈತ್ರಾ ಆಚಾರ್ ಏನ್ ಹೇಳಿದ್ರು ನೋಡಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಎರಡನೇ ಟೀಸರ್ ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ. ಟೀಸರ್‌ನಲ್ಲಿ ಕಾಣಿಸಿಕೊಂಡ ನಟಿ ಯಾರು ಎಂಬ ಕುತೂಹಲ ಹೆಚ್ಚಿದ ಬೆನ್ನಲ್ಲೇ, ನಟಿ ರುಕ್ಮಿಣಿ ವಸಂತ್ ಅಭಿನಯಿಸುತ್ತಿರುವುದು ಸ್ಪಷ್ಟವಾಗಿದೆ. ಈ ಕುರಿತು ರುಕ್ಮಿಣಿಯ ಸ್ನೇಹಿತೆಯಾದ ನಟಿ ಚೈತ್ರಾ ಆಚಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಒಂದು ಸಂದರ್ಶನದಲ್ಲಿ ಮಾತನಾಡಿದ ಚೈತ್ರಾ, ರುಕ್ಮಿಣಿ ಯಾವ ಪಾತ್ರ ಮಾಡಿದರೂ ಅದಕ್ಕೆ ನ್ಯಾಯ ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದರು. ‘ಟಾಕ್ಸಿಕ್’ ಚಿತ್ರದಲ್ಲೂ ಅವರು ಗಮನಾರ್ಹ ಪ್ರದರ್ಶನ ನೀಡಿರುವುದರಲ್ಲಿ ಸಂಶಯವೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಬ್ಬರೂ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು, ಅವರ ಸ್ನೇಹ ಇನ್ನಷ್ಟು ಗಟ್ಟಿಯಾಗಿದೆಯೆಂದು ಹೇಳಿದರು.

ಇದನ್ನೂ ಓದಿ:

ಯಶ್ ಬಗ್ಗೆ ಮಾತನಾಡಿದ ಚೈತ್ರಾ, ಟೀಸರ್‌ನಲ್ಲೇ ಸಾಕಷ್ಟು ವಿಷಯ ಅನಾವರಣಗೊಂಡಿದೆ. ಆದರೆ ಸಂಪೂರ್ಣ ಚಿತ್ರದಲ್ಲಿ ಇನ್ನಷ್ಟು ಅಚ್ಚರಿ ಅಂಶಗಳಿರಬಹುದು ಎಂದು ಕುತೂಹಲ ವ್ಯಕ್ತಪಡಿಸಿದರು. ಯಶ್ ತಮ್ಮ ಮೆಚ್ಚಿನ ನಟರಲ್ಲಿ ಒಬ್ಬರು ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !