April 17, 2026
Friday, April 17, 2026
spot_img

ಚಿಕ್ಕಮಗಳೂರು ಹೈವೇಗೆ ಈ ಒಂಟಿ ಸಲಗವೇ ರಾಜ, ಓಡಾಡ್ಬೇಡಿ ಎಂದು ಜನರಿಗೆ ಎಚ್ಚರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರು ತಾಲೂಕಿನ ಶೃಂಗೇರಿ ಹೈವೇಯ ಕಣತಿ ಗ್ರಾಮದ ಬಳಿ ಒಂಟಿ ಸಲಗವೊಂದು ಬಿಂದಾಸ್‌ಆಗಿ ಓಡಾಡುತ್ತಿದೆ.

ಒಂಟಿ ಸಲಗದ ಓಡಾಟದಿಂದ ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳುವ ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ. ಹಾವುಬಳುಕಿನ ರಸ್ತೆಯಾಗಿದ್ದರಿಂದ ವಾಹನ ಸವಾರರಿಗೆ ಆನೆ ಇರುವುದು ತಕ್ಷಣಕ್ಕೆ ತಿಳಿಯುವುದಿಲ್ಲ.

ಇದರಿಂದಾಗಿ ಹೊರನಾಡು, ಶೃಂಗೇರಿ, ಕಳಸ ಕಡೆಗೆ ಸಾಗುವ ವಾಹನ ಸವಾರರು, ಸ್ಥಳೀಯರು ಎಚ್ಚರಿಕೆಯಿಂದ ಇರಬೇಕು. ತಿರುವಿನಲ್ಲಿ ಸರಿಯಾಗಿ ನೋಡಿಕೊಂಡು ಸಾಗಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !