April 17, 2026
Friday, April 17, 2026
spot_img

ದಿನಭವಿಷ್ಯ: ಮನೆಯಲ್ಲಿಂದು ನೆಮ್ಮದಿ, ಸೌಹಾರ್ದದ ವಾತಾವರಣ, ಹಣದ ಸಮಸ್ಯೆ ಇಲ್ಲ

ಮೇಷ
ಮನೆಯಲ್ಲಿ ಶಾಂತ, ಸೌಹಾರ್ದ ವಾತಾವರಣ. ಹಣದ ವಿಚಾರದಲ್ಲಿ ಪೂರಕ ಬೆಳವಣಿಗೆ. ವೃತ್ತಿಯಲ್ಲಿ ಸ್ವಲ್ಪ ಸಮಸ್ಯೆ ಕಾಣಿಸಿಕೊಳ್ಳಬಹುದು.
ವೃಷಭ
ನಿಮ್ಮ ವ್ಯವಹಾರ ವಿಸ್ತರಿಸುವುದು ನಿಮ್ಮ ಮುಖ್ಯ ಗುರಿ. ಅದೃಷ್ಟ ನಿಮ್ಮ ಜತೆಗಿದೆ. ಉದ್ಯೋಗ ಬದಲಾವಣೆಗೆ ಕಾಲ ಪಕ್ವವಾಗಿದೆ. ಧನಪ್ರಾಪ್ತಿ.        
ಮಿಥುನ
ಪ್ರಗತಿಗೆ ಪೂರಕ ವಾತಾವರಣ. ಕೆಲಸದಲ್ಲಿ ಅತ್ಯುತ್ಸಾಹ ತೋರುವಿರಿ. ಮನೆಯಲ್ಲಿ ಹಿರಿಯರ ಆರೋಗ್ಯ ಸಮಸ್ಯೆ. ಕಾಳಜಿ ವಹಿಸಿರಿ.
ಕಟಕ
ಇಂದು ಹಣದ ವಿಚಾರದಲ್ಲಿ ಪ್ರಗತಿ ಕಾಣದು. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಣೆ. ಕೌಟುಂಬಿಕ ಒತ್ತಡ ಶಮನ.  
ಸಿಂಹ
ಬಾಕಿ ಇರುವ ಕಾರ್ಯ ಮುಗಿಸಲು ಗಮನ ಕೊಡಿ. ವೃತ್ತಿಯಲ್ಲಿ ಒತ್ತಡ ಹೆಚ್ಚು . ಕೆಲವರ ಅವಕೃಪೆಗೆ ತುತ್ತಾಗುವಿರಿ. ಮನೆಯಲ್ಲಿ ಸಮಾಧಾನ.    

ಕನ್ಯಾ
ಒತ್ತಡದ ಬದುಕಿಂದ ದೂರವಾಗಿ ಪ್ರವಾಸ ಹೊರಡಲು ಸಕಾಲ. ಮನೆಯವರ ಇಚ್ಛೆ ಅರಿತು ವ್ಯವಹರಿಸಿ. ಇಲ್ಲವಾದರೆ ವಾಗ್ವಾದ ನಡೆದೀತು. ತುಲಾ
ಹೆಚ್ಚು ಭಾವುಕರಾಗಿ ವರ್ತಿಸುವಿರಿ. ಇತರರ ಜತೆಗಿನ ವ್ಯವಹಾರದಲ್ಲಿ ಅದು ಪ್ರತಿ-ಲಿಸಲಿದೆ. ಅನಾರೋಗ್ಯದ ಸಂಕೇತ ಕಂಡರೆ ವೈದ್ಯರನ್ನು ಕಾಣಿ.
ವೃಶ್ಚಿಕ
ಮಹತ್ತರ ತೀರ್ಮಾನ ಇಂದು ತಾಳದಿರಿ. ಅದು ಸೂಕ್ತ -ಲ ನೀಡದು. ಆತ್ಮೀಯರೇ ವಿರೋಧ ಸೂಚಿಸುವರು. ಹೊಂದಾಣಿಕೆ ಒಳಿತು.      
ಧನು
ಆರ್ಥಿಕವಾಗಿ ನಿಮಗೆ ಮಹತ್ವದ ದಿನ. ಧನಲಾಭ. ಅನ್ಯರ ಜತೆ ಹೊಂದಿಕೊಳ್ಳಲು ಕಲಿಯಿರಿ. ಹಠಮಾರಿ ಧೋರಣೆ ಬಿಟ್ಟುಬಿಡಿ.            
ಮಕರ
ಇತರರ ನೆರವು ಬೇಡವೆಂಬ ಮನಸ್ಥಿತಿ ನಿಮ್ಮದು. ಆದರೆ ಎಲ್ಲರನ್ನು ದೂರ ಮಾಡಬೇಡಿ. ನಿಮ್ಮ ತಪ್ಪು ಒಪ್ಪಿಕೊಳ್ಳಲು ಮುಜುಗರ ಬೇಕಾಗಿಲ್ಲ.        
ಕುಂಭ
ಕುಟುಂಬ ಸದಸ್ಯರ ಜತೆ ಹೊಂದಾಣಿಕೆ ಇರಲಿ. ಜಗಳಕ್ಕೆ ಆಸ್ಪದ ನೀಡಬೇಡಿ. ಪ್ರಯಾಣ ಸಾಧ್ಯತೆಯಿದೆ. ಖರ್ಚು ಇಂದು ಹೆಚ್ಚಲಿದೆ.    
ಮೀನ
ಮನೆಯಲ್ಲಿ ಸಂಬಂಧ ಕೆಡಲು ಆಸ್ಪದ ಕೊಡಬೇಡಿ. ಹೊಟ್ಟೆ ಕೆಡುವ ಸಾಧ್ಯತೆ. ಸಾತ್ವಿಕ ಆಹಾರ ಸೇವಿಸಿ. ಆರ್ಥಿಕ ಪರಿಸ್ಥಿತಿ ಉತ್ತಮ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !