February 21, 2026
Saturday, February 21, 2026
spot_img

ಸದ್ದಿಲ್ಲದೆ ಸಜ್ಜಾಗಿದೆ ವೆಡ್ಡಿಂಗ್ ಡೆಸ್ಟಿನೇಷನ್: ಕಡೆಗೂ ರಶ್ಮಿಕಾ ಕಡೆಯಿಂದ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿನಿಮಾ ತೆರೆಯ ಮೇಲೆ ಅದ್ಭುತ ಕೆಮಿಸ್ಟ್ರಿ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ, ಈಗ ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ. ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಇವರ ಮದುವೆಯ ಗಾಸಿಪ್‌ಗಳಿಗೆ ಈಗ ಸ್ವತಃ ರಶ್ಮಿಕಾ ಅವರೇ ತೆರೆ ಎಳೆದಿದ್ದಾರೆ.

ಬಾಲಿವುಡ್ ಹಂಗಾಮ ತಂಡದವರು ಕಳುಹಿಸಿದ ‘ಅಭಿನಂದನೆಗಳು’ ಎಂಬ ಸಂದೇಶಕ್ಕೆ ರಶ್ಮಿಕಾ ಅವರು ‘ಧನ್ಯವಾದಗಳು’ ಎಂದು ಪ್ರತಿಕ್ರಿಯಿಸುವ ಮೂಲಕ, ತಾವು ಮದುವೆಯಾಗುತ್ತಿರುವುದು ನಿಜ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಇದುವರೆಗೆ ರಹಸ್ಯವಾಗಿದ್ದ ಇವರ ಪ್ರೇಮ ಪುರಾಣಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಂತಾಗಿದೆ.

ರಾಜಸ್ಥಾನದ ಐತಿಹಾಸಿಕ ನಗರಿ ಉದಯಪುರದಲ್ಲಿ ಇವರ ಮದುವೆ ಸಂಭ್ರಮ ನಡೆಯಲಿದೆ. ಈಗಾಗಲೇ ಅಲ್ಲಿನ ಐಷಾರಾಮಿ ಹೋಟೆಲ್ ಬುಕ್ ಆಗಿದ್ದು, ಸಿದ್ಧತೆಗಳು ಜೋರಾಗಿ ಸಾಗಿವೆ. ಫೆಬ್ರವರಿ 26ರಂದು ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯಕ್ಕೆ ಕಾಲಿಡಲಿದ್ದಾರೆ.

ತೆರೆಯ ಮೇಲೆ ‘ಗೀತಾ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದ ಈ ಜೋಡಿ, ಈಗ ಹಸೆಮಣೆ ಏರುತ್ತಿರುವುದು ಅಭಿಮಾನಿಗಳಲ್ಲಿ ಸಂಭ್ರಮ ತಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !