July 7, 2026
Tuesday, July 7, 2026
spot_img

ನಾಳಿನ ಸೂಪರ್ 8 ಮ್ಯಾಚ್ ನಿಂದ ಅಭಿಷೇಕ್ ಶರ್ಮಾ ಔಟ್? ಈ ಕುರಿತು ಸೂರ್ಯ ಏನಂದ್ರು?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಕಳಪೆ ಫಾರ್ಮ್ ನಲ್ಲಿರುವ ಟೀಮ್ ಇಂಡಿಯಾ ಓಪನರ್ ಅಭಿಷೇಕ್ ಶರ್ಮಾ ಅವರ ಆಟದ ಕುರಿತು ಟೀಕೆಗಳು ಶುರುವಾಗಿದ್ದು, ಅಭಿಷೇಕ್ ಬದಲು ಸಂಜು ಸ್ಯಾಮ್ಸನ್ ತಂಡ ಸೇರಿಕೊಳ್ಳಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಇತ್ತ ಈ ಮಾತುಗಳ ನಡುವೆ ಸೂಪರ್ 8 ಹಂತದ ಪಂದ್ಯಕ್ಕೂ ಮೊದಲು ಸೂರ್ಯಕುಮಾರ್ ಯಾದವ್ ಪ್ರತಿಕ್ರಿಯೆ ನೀಡಿದ್ದು, ಅಭಿಷೇಕ್ ಶರ್ಮಾ ಅವರ ಕಳಪೆ ಫಾರ್ಮ್ ಬಗ್ಗೆ ನಮಗೇನೂ ಚಿಂತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಪಂದ್ಯಕ್ಕೂ ಮುನ್ನ ಅಹ್ಮದಾಬಾದ್‌ನಲ್ಲಿ ಮಾತನಾಡಿದ ಅವರು, ಡಿ ರೆಡಿಯಾಗು’: ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ , ಅಭಿಷೇಕ್ ಫಾರ್ಮ್ ಬಗ್ಗೆ ತಲೆಕೆಡಿಸಿಕೊಂಡವರನ್ನು ನೋಡಿದ್ರೆ ನಂಗೆ ಬೇಜಾರಾಗುತ್ತೆ. ಇದು ಟೀಮ್ ಗೇಮ್. ಕಳೆದ ವರ್ಷ ಅಭಿಷೇಕ್ ತಂಡವನ್ನ ಹೆಗಲ ಮೇಲೆ ಹೊತ್ತಿದ್ದ. ಈಗ ನಾವು ಅವನ ಪರ ನಿಲ್ಲುತ್ತೇವೆ ಎಂದು ಸೂರ್ಯ ಹೇಳಿದರು.

ಇದೇ ವೇಳೆ, ‘ಸಂಜು ಸ್ಯಾಮ್ಸನ್ ತಂಡಕ್ಕೆ ಬರುತ್ತಾರಾ?’ ಎಂಬ ಪ್ರಶ್ನೆಗೂ ಸೂರ್ಯಕುಮಾರ್ ಉತ್ತರಿಸಿದ್ದು, ದೊಡ್ಡ ಸ್ಕೋರ್ ಮಾಡಲು ತಂಡ ಪ್ರಯತ್ನಿಸುತ್ತಿದೆ. ಅಭಿಷೇಕ್ ಮತ್ತು ತಿಲಕ್‌ಗೆ ಟೀಮ್ ಮ್ಯಾನೇಜ್‌ಮೆಂಟ್ ಬೆಂಬಲ ನೀಡುತ್ತಿದೆ. ಇವರಲ್ಲಿ ಯಾರನ್ನು ಬದಲಿಸಿದರೂ ತಂಡ ಗೆಲ್ಲುತ್ತಲೇ ಇದೆ, ಹಾಗಿದ್ದಾಗ ತಂಡವನ್ನು ಯಾಕೆ ಬದಲಿಸಬೇಕು? ಈ ವಿಶ್ವಕಪ್‌ನಲ್ಲಿ ಪಿಚ್‌ಗಳು ಸ್ವಲ್ಪ ವಿಭಿನ್ನವಾಗಿವೆ. ಸವಾಲುಗಳನ್ನು ಎದುರಿಸಲು ನಮ್ಮ ತಂಡ ಸಿದ್ಧವಾಗಿದೆ ಎಂದು ಸೂರ್ಯ ವಿವರಿಸಿದರು.

ಈ ಟೂರ್ನಿಯಲ್ಲಿ ಅಭಿಷೇಕ್ ಶರ್ಮಾ ಇದುವರೆಗೆ 8 ಎಸೆತಗಳನ್ನು ಎದುರಿಸಿದ್ದರೂ ಒಂದೇ ಒಂದು ರನ್ ಗಳಿಸಿಲ್ಲ. ಅಮೆರಿಕ ವಿರುದ್ಧ ಅಲಿ ಖಾನ್ ಬೌಲಿಂಗ್‌ನಲ್ಲಿ ಔಟಾದರು. ಪಾಕಿಸ್ತಾನ ವಿರುದ್ಧ ಸಲ್ಮಾನ್ ಅಲಿ ಅಘಾ ಅವರ ಮೊದಲ ಓವರ್‌ನಲ್ಲೇ ವಿಕೆಟ್ ಒಪ್ಪಿಸಿದರು. ನೆದರ್ಲೆಂಡ್ಸ್ ವಿರುದ್ಧ ಆರ್ಯನ್ ದತ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆದರು. ಕಳೆದ ಏಳು ಇನ್ನಿಂಗ್ಸ್‌ಗಳಲ್ಲಿ ಅವರು ಐದು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !