February 22, 2026
Sunday, February 22, 2026
spot_img

Fashion | ಹೈ ಹೀಲ್ಸ್‌ ಹಾಕದೆ ಕೂಡ ನೀವು ಎತ್ತರವಾಗಿ ಕಾಣಬಹುದು! ಹೇಗೆ ಅಂತೀರಾ? ಇಲ್ಲಿದೆ ಟಿಪ್ಸ್ ನೋಡಿ

ಹೈ ಹೀಲ್ಸ್ ಧರಿಸಿದರೆ ದೇಹ ಉದ್ದವಾಗಿ ಕಾಣುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಪ್ರತಿದಿನ ಹೈ ಹೀಲ್ಸ್ ಬಳಸುವುದರಿಂದ ಕಾಲು, ಮೊಣಕಾಲು ಹಾಗೂ ಬೆನ್ನು ನೋವು ಉಂಟಾಗಬಹುದು. ಹಾಗಾದರೆ ಹೀಲ್ಸ್ ಹಾಕದೇ ಎತ್ತರವಾಗಿ, ಸ್ಲಿಮ್ ಆಗಿ ಕಾಣೋದು ಹೇಗೆ? ಕೆಲವು ಸರಳ ಫ್ಯಾಷನ್ ತಂತ್ರಗಳು ನಿಮ್ಮ ಲುಕ್‌ನ್ನು ಸಂಪೂರ್ಣವಾಗಿ ಬದಲಾಯಿಸಬಹುದು.

ಮೊದಲಿಗೆ ಬಟ್ಟೆಯ ಆಯ್ಕೆ ಮುಖ್ಯ. ಹೈ ವೇಸ್ಟ್ ಪ್ಯಾಂಟ್ ಅಥವಾ ಬೆಲ್ ಬಾಟಮ್ ಶೈಲಿಯ ಜೀನ್ಸ್ ಕಾಲುಗಳನ್ನು ಉದ್ದವಾಗಿ ತೋರಿಸುತ್ತವೆ. ಇವುಗಳ ಜೊತೆ ಕ್ರಾಪ್ ಟಾಪ್ ಅಥವಾ ಸರಳ ಟಕ್-ಇನ್ ಶರ್ಟ್ ಧರಿಸಿದರೆ ದೇಹದ ಪ್ರೋಪೋರ್ಷನ್ ಚೆನ್ನಾಗಿ ಕಾಣುತ್ತದೆ. ಇದರಿಂದ ಸ್ವಾಭಾವಿಕ ಎತ್ತರ ಹೆಚ್ಚಿದಂತೆ ಕಾಣಿಸುತ್ತದೆ.

ಒಂದೇ ಬಣ್ಣದ ಉಡುಪು ಧರಿಸುವುದು ಮತ್ತೊಂದು ಸುಲಭ ಟ್ರಿಕ್. ಟಾಪ್ ಮತ್ತು ಬಾಟಮ್ ಒಂದೇ ಬಣ್ಣದಲ್ಲಿದ್ದರೆ ದೇಹದಲ್ಲಿ ವ್ಯತ್ಯಾಸ ಕಡಿಮೆ ಕಾಣಿಸಿ, ಒಟ್ಟಾರೆ ಲುಕ್ ಉದ್ದವಾಗಿ ತೋರುತ್ತದೆ. ವಿಶೇಷವಾಗಿ ಗಾಢ ಬಣ್ಣಗಳು ಅಥವಾ ಪೇಸ್ಟಲ್ ಶೇಡ್‌ಗಳು ಉತ್ತಮ ಆಯ್ಕೆ.

ಇದನ್ನೂ ಓದಿ:

ಉದ್ದ ಪಟ್ಟೆಗಳಿರುವ ಡ್ರೆಸ್ ಅಥವಾ ಕುರ್ತಿಗಳು ಕೂಡ ಎತ್ತರದ ಭಾವನೆ ಕೊಡುತ್ತವೆ. ಅಡ್ಡ ಪಟ್ಟೆಗಳನ್ನು ತಪ್ಪಿಸುವುದು ಉತ್ತಮ. ಉದ್ದನೆಯ, ಸರಳ ಫಿಟ್ ಕುರ್ತಾ ಹಾಗೂ ನೇರ ಪ್ಯಾಂಟ್ ಅಥವಾ ಪಲಾಝೋ ಜೋಡಿಸಿದರೆ ಸಮತೋಲಿತ ಹಾಗೂ ಸೊಗಸಾದ ಸ್ಟೈಲ್ ಸಿಗುತ್ತದೆ.

ಎತ್ತರವಾಗಿ ಕಾಣುವುದು ಹೀಲ್ಸ್ ಮೇಲೆ ಮಾತ್ರ ಅವಲಂಬಿತವಲ್ಲ. ಸರಿಯಾದ ಕಟ್, ಬಣ್ಣ ಹಾಗೂ ಫಿಟ್ ಆಯ್ಕೆ ಮಾಡಿದರೆ ನಿಮ್ಮ ಆತ್ಮವಿಶ್ವಾಸವೇ ನಿಮ್ಮ ಎತ್ತರವನ್ನು ಹೆಚ್ಚಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !