June 24, 2026
Wednesday, June 24, 2026
spot_img

70ನೇ ಫಿಲ್ಮ್‌ಫೇರ್‌ ಅವಾರ್ಡ್: ಕನ್ನಡ ‘ಶಾಖಾಹಾರಿ’ ಬೆಸ್ಟ್‌ ಸಿನಿಮಾ, ಶ್ರೀಮುರಳಿ ಅತ್ಯುತ್ತಮ ನಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇರಳ ಪ್ರವಾಸೋದ್ಯಮದ ಸಹಯೋಗದೊಂದಿಗೆ ಕೊಚ್ಚಿಯಲ್ಲಿ 70ನೇ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಚಿತ್ರಗಳ ಪ್ರಶಸ್ತಿಗಳು ಅನೌನ್ಸ್‌ ಆಗಿದೆ.

ಕನ್ನಡದಲ್ಲಿ ‘ಶಾಖಾಹಾರಿ’ ಚಿತ್ರಕ್ಕೆ 2024ನೇ ಸಾಲಿನ ಅತ್ಯುತ್ತಮ ಸಿನಿಮಾ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಸಿಕ್ಕಿದೆ. ‘ಬಘೀರ’ ಚಿತ್ರದ ನಟನೆಗಾಗಿ ಶ್ರೀಮುರಳಿ ಅತ್ಯುತ್ತಮ ನಟನಾಗಿ ಹೊರಹೊಮ್ಮಿದ್ದಾರೆ.

ವಿಜೇತರ ಸಂಪೂರ್ಣ ಪಟ್ಟಿ ಇಲ್ಲಿದೆ..
ಅತ್ಯುತ್ತಮ ಸಿನಿಮಾ: ಶಾಖಾಹಾರಿ, ನಿರ್ದೇಶಕ: ಸಂದೀಪ್‌ ಸುಂಕದ್
ಅತ್ಯುತ್ತಮ ನಿರ್ದೇಶಕ: ಪೃಥ್ವಿ ಕೋಣನೂರು, ಸಿನಿಮಾ: ಹದಿನೇಳೆಂಟು
ಅತ್ಯುತ್ತಮ ನಟ: ಶ್ರೀಮುರಳಿ, ಸಿನಿಮಾ: ಬಘೀರ
ಅತ್ಯುತ್ತಮ ನಟಿ: ಅಕ್ಷತಾ ಪಾಂಡವಪುರ, ಚಿತ್ರ: ಕೋಳಿ ಎಸ್ರು
ಅತ್ಯುತ್ತಮ ಸಿನಿಮಾ (ವಿಮರ್ಶಕರ ಆಯ್ಕೆ) : ಬ್ಲಿಂಕ್‌
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಗೌರಿಶಂಕರ್‌, ಸಿನಿಮಾ: ಕೆರೆಬೇಟೆ
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಅಂಕಿತಾ ಅಮರ್‌, ಸಿನಿಮಾ: ಇಬ್ಬನಿ ತಬ್ಬಿದ ಇಳೆಯಲಿ
ಅತ್ಯುತ್ತಮ ಪೋಷಕ ನಟ: ಗೋಪಾಲಕೃಷ್ಣ ದೇಶಪಾಂಡೆ, ಸಿನಿಮಾ: ಬ್ಲಿಂಕ್‌
ಅತ್ಯುತ್ತಮ ಪೋಷಕ ನಟಿ: ಪ್ರಿಯಾ ಶಠಮರ್ಷಣ, ಸಿನಿಮಾ: ಭೀಮ
ಅತ್ಯುತ್ತಮ ಸಂಗೀತ ನಿರ್ದೇಶಕ : ಅರ್ಜುನ್‌ ಜನ್ಯಾ, ಸಿನಿಮಾ: ಕೃಷ್ಣಂ ಪ್ರಣಯ ಸಖಿ
ಅತ್ಯುತ್ತಮ ಸಾಹಿತ್ಯ : ವಿ. ನಾಗೇಂದ್ರ ಪ್ರಸಾದ್‌, ಹಾಡು: ದ್ವಾಪರ, ಚಿತ್ರ: ಕೃಷ್ಣಂ ಪ್ರಣಯ ಸಖಿ
ಅತ್ಯುತ್ತಮ ಹಿನ್ನೆಲೆ ಗಾಯಕ : ಜಸ್ಕರನ್‌ ಸಿಂಗ್‌, ದ್ವಾಪರ, ಚಿತ್ರ: ಕೃಷ್ಣಂ ಪ್ರಣಯ ಸಖಿ
ಅತ್ಯುತ್ತಮ ಹಿನ್ನೆಲೆ ಗಾಯಕಿ : ಶ್ರುತಿ ಪ್ರಹ್ಲಾದ್‌, ಹಾಡು: ಹಿತ್ತಲಕ ಕರಿಬ್ಯಾಡ ಮಾವ, ಚಿತ್ರ: ಕರಟಕ ದಮನಕ
ಅತ್ಯುತ್ತಮ ಹೊಸ ನಟ: ಸಮರ್ಜಿತ್‌ ಲಂಕೇಶ್‌, ಚಿತ್ರ: ಗೌರಿ
ಅತ್ಯುತ್ತಮ ಹೊಸ ನಟಿ: ಬಿಂದು ಶಿವರಾಂ, ಚಿತ್ರ: ಕೆರೆಬೇಟೆ

ತೆಲುಗು
ತೆಲುಗಿನಲ್ಲಿ ‘ಪುಷ್ಪ- 2’ ಅತ್ಯುತ್ತಮ ಸಿನಿಮಾ ಪ್ರಶಸ್ತಿ ಪಡೆದಿದೆ.
ಸುಕುಮಾರನ್ ಅತ್ಯುತ್ತಮ ನಿರ್ದೇಶಕ,
ಅಲ್ಲು ಅರ್ಜುನ್ ಅತ್ಯುತ್ತಮ ನಟ,
ದೇವಿಶ್ರೀ ಪ್ರಸಾದ್ ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ ಪ್ರಶಸ್ತಿ ಲಭಿಸಿದೆ.
ನಿವೇತಾ ಥಾಮಸ್ ಅತ್ಯುತ್ತಮ ನಟಿ ಪ್ರಶಸ್ತಿ

ತಮಿಳಿನಲ್ಲಿ
ಅಮರನ್ ಚಿತ್ರದ ನಟನೆಯಾಗಿ ಶಿವಕಾರ್ತಿಕೇಯನ್ ಅತ್ಯುತ್ತಮ ನಟ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಸಾಯಿ ಪಲ್ಲವಿ ಅತ್ಯುತ್ತಮ ನಟಿ ಪ್ರಶಸ್ತಿ
‘ಮೇಯಳಗನ್’ ಚಿತ್ರದ ನಟನೆಗಾಗಿ ಕಾರ್ತಿ ಅತ್ಯತ್ತಮ ಪೋಷಕ ನಟ ಪ್ರಶಸ್ತಿ

ಮಲಯಾಳಂನಲ್ಲಿ
‘ಮಂಜುಮೇಲ್ ಬಾಯ್ಸ್’ ಅತ್ಯುತ್ತಮ ಸಿನಿಮಾ,
ಮಮ್ಮುಟಿ ಅತ್ಯುತ್ತಮ ನಟ(ಭ್ರಮಯುಗಂ),
ಊರ್ವಶಿ ಅತ್ಯುತ್ತಮ ನಟಿ (ಉಲ್ಲೋಳುಕ್ಕು)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !