April 17, 2026
Friday, April 17, 2026
spot_img

ದೈವಕ್ಕೆ ಅಪಮಾನ ಆರೋಪ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ಗೆ ಮತ್ತೆ ನೊಟೀಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ ನಟ ರಣವೀರ್‌ ಸಿಂಗ್‌ ದೈವ ನಿಂದನೆ ಆರೋಪ ಎದುರಿಸುತ್ತಿದ್ದು, ಈಗಾಗಲೇ ನೊಟೀಸ್ ನೀಡಿದರೂ ನಟನಿಂದ ಯಾವುದೇ ಪ್ರತಿಕ್ರಿಯಿ ಸಿಕ್ಕಿಲ್ಲ. ಹೀಗಾಗಿ ಮತ್ತೊಮ್ಮೆ ನೊಟೀಸ್ ನೀಡಲಾಗಿದೆ.

ಈಗಾಗಲೇ‌ ಪೊಲೀಸರು ಎರಡು ನೊಟೀಸ್ ನೀಡಿದ್ದಾರೆ. ಆದರೆ, ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಹೀಗಾಗಿ, ಹೈಗ್ರೌಂಡ್‌ ಪೊಲೀಸರು ಕಾನೂನು ಮೊರೆ ಹೋಗಲು ಮುಂದಾಗಿದ್ದಾರೆ.

ಕಾಂತಾರ 2 ಸಿನಿಮಾದ ವಿಚಾರವಾಗಿ ಗೋವಾ ಫಿಲ್ಮ್‌ಫೇರ್ ಕಾರ್ಯಕ್ರಮದಲ್ಲಿ ರಣವೀರ್ ಮಾತನಾಡುವಾಗ ಯಟವಟ್ಟು ಮಾಡಿಕೊಂಡಿದ್ದರು. ದೈವದ ವಿಚಾರವಾಗಿ ಅವಹೇಳನ ಪದ ಬಳಕೆ ಎಂದು ಎಫ್‌ಐಆರ್ ದಾಖಲು ಮಾಡಲಾಗಿತ್ತು.

ಮುಂಬೈನಲ್ಲಿರುವ ರಣವೀರ್ ನಿವಾಸಕ್ಕೆ ಎರಡು‌ ನೊಟೀಸ್ ನೀಡಿರುವ ಪೊಲೀಸರು. ನಟನ ವಾಟ್ಸಪ್ ಗೂ ನೊಟೀಸ್ ಕಳುಹಿಸಿದ್ದಾರೆ. ಆದ್ರೆ ಯಾವ ನೊಟೀಸ್ ಗೂ ನಟನಿಂದ ಡೋಂಟ್ ಕೇರ್. ಹೀಗಾಗಿ ಮತ್ತೊಮ್ಮೆ ನೋಟಿಸ್ ನೀಡಲು ಪೊಲೀಸರು ಮುಂದಾಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !