February 22, 2026
Sunday, February 22, 2026
spot_img

ಟಿ20 ವಿಶ್ವಕಪ್ ಸೂಪರ್-08: ಮಿಲ್ಲರ್, ಬ್ರೆವಿಸ್ ಭರ್ಜರಿ ಆಟ: ಭಾರತಕ್ಕೆ188 ರನ್ ಗಳ ಬಿಗ್ ಟಾರ್ಗೆಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ-20 ವಿಶ್ವಕಪ್ ನ ಸೂಪರ್-08 ಹಂತದಲ್ಲಿ ದಕ್ಷಿಣ ಆಫ್ರಿಕಾವು ಭಾರತಕ್ಕೆ 188 ರನ್ ಗಳ ಬಿಗ್ ಟಾರ್ಗೆಟ್ ನೀಡಿದೆ.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳ ಬೃಹತ್ ರನ್ ಗಳಿಸಿತು.

ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರರಾದ ಏಡೆನ್ ಮಾಕ್ರಾಮ್ 4, ಕ್ವಿಂಟಾನ್ ಡಿ ಕಾಕ್ ಹಾಗೂ ರಿಯಾನ್ ರೆಕೆಲ್ಟನ್ ಅವರನ್ನು ಕೇವಲ 7 ರನ್ ಗಳಿಗೆ ಫೆವಿಲಿಯನ್ ಗೆ ಅಟ್ಟುವಲ್ಲಿ ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು. ಬಳಿಕ ಡಿ. ಬ್ರೀವಿಸ್ 45 ಮತ್ತು ಡೇವಿಡ್ ಮಿಲ್ಲರ್ 63 ರನ್ ಗಳಿಸುವುದರೊಂದಿಗೆ ಭಾರತದ ಬೌಲರ್ ಗಳನ್ನು ಬೆಂಡತ್ತಿದರು. ತ್ರಿಸ್ಟಾನ್ ಸ್ಟಾಬ್ಸ್ ಕೂಡಾ ಅಜೇಯ 44 ರನ್ ಗಳಿಸುವುದರೊಂದಿಗೆ ಆಫ್ರಿಕಾದ ರನ್ ವೇಗವನ್ನು ಹೆಚ್ಚಿಸಿದರು.

ಭಾರತದ ಪರ ಬೂಮ್ರಾ 3 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್ 2, ವರುಣ್ ಚಕ್ರವರ್ತಿ ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !