February 23, 2026
Monday, February 23, 2026
spot_img

Viral | ಮೈದಾನದಲ್ಲೇ ಕ್ಲಾಸ್ ತಗೊಂಡ ಗಂಭೀರ್: ಕೋಚ್ ಮಾತಿಗೆ ಖಡಕ್ ರಿಯಾಕ್ಷನ್ ಕೊಟ್ಟ ಪಾಂಡ್ಯ

2026ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಮೊದಲ ಸೋಲು ಎದುರಾಗಿದೆ. ಅಹಮದಾಬಾದ್‌ನಲ್ಲಿ ನಡೆದ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 76 ರನ್‌ಗಳಿಂದ ಗೆದ್ದು ಭಾರತಕ್ಕೆ ಭಾರಿ ಆಘಾತ ನೀಡಿದೆ. ಈ ಸೋಲಿನಿಂದ ಭಾರತ ತಂಡದ ರನ್‌ರೇಟ್ ಕುಸಿದಿದ್ದು, ಸೆಮಿಫೈನಲ್ ಪ್ರವೇಶದ ದಾರಿ ಸಂಕೀರ್ಣವಾಗಿದೆ.

ಉಳಿದ ಎರಡು ಪಂದ್ಯಗಳಲ್ಲಿ ಭಾರೀ ಅಂತರದ ಜಯ ಅಗತ್ಯವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

ಪಂದ್ಯದ ವೇಳೆ ಭಾರತ ಆಟಗಾರರ ಪ್ರದರ್ಶನದಿಂದ ಮುಖ್ಯ ಕೋಚ್ ಗೌತಮ್ ಗಂಭೀರ್ ಅಸಮಾಧಾನಗೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ತಂಡದ ಯೋಜನೆಯಂತೆ ಬೌಲಿಂಗ್ ನಡೆಯುತ್ತಿಲ್ಲ ಎಂಬ ಅಸಹನೆಯು ಅವರ ಮುಖಭಾವದಲ್ಲಿ ಸ್ಪಷ್ಟವಾಗಿತ್ತು. ವಿಶೇಷವಾಗಿ ಹಾರ್ದಿಕ್ ಪಾಂಡ್ಯ ಎಸೆದ ಒಂದು ನೋಬಾಲ್‌ಗೆ ಮಿಲ್ಲರ್ ಸಿಕ್ಸರ್ ಬಾರಿಸಿದ ಕ್ಷಣದಿಂದ ದಕ್ಷಿಣ ಆಫ್ರಿಕಾ ಆಟ ವೇಗ ಪಡೆದುಕೊಂಡಿತು.

ಇದನ್ನೂ ಓದಿ:

ಈ ವೇಳೆ ಗಂಭೀರ್ ಬೌಂಡರಿ ಬಳಿ ಫೀಲ್ಡಿಂಗ್ ಮಾಡುತ್ತಿದ್ದ ಪಾಂಡ್ಯ ಜೊತೆ ಮಾತುಕತೆ ನಡೆಸಿ ಕೋಪ ವ್ಯಕ್ತಪಡಿಸಿದ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಇಬ್ಬರ ನಡುವೆ ನಡೆದ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗಂಭೀರ್ ಮಾತಿಗೆ ಪಾಂಡ್ಯ ಕೂಡ ಬದಲಿ ಉತ್ತರ ಕೊಟ್ಟ ಕಾರಣ, ಅಲ್ಲಿನ ಮಾತುಕಥೆ ಮತ್ತಷ್ಟು ಹಿಟ್ ಆದಂತೆ ಕಂಡು ಬಂತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !