October 8, 2026
Thursday, October 8, 2026

ಭಾರತದ ಗೆಲುವಿನ ಹೀರೋಗೆ ಐಸಿಸಿ ಶಾಕ್: ಯುವ ವೇಗಿ ಗುರ್ನೂರ್ ಬ್ರಾರ್‌ಗೆ ದಂಡದ ಬರೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಭಾರತದ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವ ವೇಗದ ಬೌಲರ್ ಗುರ್ನೂರ್ ಬ್ರಾರ್, ಇದೀಗ ಐಸಿಸಿ (ICC) ಶಿಸ್ತು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ದಂಡನೆಗೆ ಗುರಿಯಾಗಿದ್ದಾರೆ.

ವಿಕೆಟ್ ಕಬಳಿಸಿ ಹೀರೋ ಆದ ಬೆನ್ನಲ್ಲೇ ಆಘಾತ

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಾರಕ ಬೌಲಿಂಗ್ ಮಾಡಿದ್ದ ಗುರ್ನೂರ್ ಬ್ರಾರ್ ಒಂದೇ ಓವರ್‌ನಲ್ಲಿ ಇಬ್ಬರು ಆರಂಭಿಕ ಆಟಗಾರರನ್ನು ಔಟ್ ಮಾಡುವ ಮೂಲಕ ಇಂಗ್ಲೆಂಡ್‌ಗೆ ಬಿಗ್ ಶಾಕ್ ನೀಡಿದ್ದರು. ಪಂದ್ಯದಲ್ಲಿ ಒಟ್ಟು 2 ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿ ಭಾರತದ ಗೆಲುವನ್ನು ಸುಲಭವಾಗಿಸಿದ್ದರು.

ಐಸಿಸಿ ದಂಡನೆಗೆ ಕಾರಣವೇನು?

ಪಂದ್ಯದ ವೇಳೆ ಇಂಗ್ಲೆಂಡ್ ಬ್ಯಾಟರ್ ಬೆನ್ ಡಕೆಟ್ ಕಡೆಗೆ ಅಪಾಯಕಾರಿ ರೀತಿಯಲ್ಲಿ ಚೆಂಡನ್ನು ಎಸೆದ ಕಾರಣ ಬ್ರಾರ್ ಐಸಿಸಿ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಮ್ಯಾಚ್ ರೆಫರಿ ಖಚಿತಪಡಿಸಿದ್ದಾರೆ. ನಿಯಮ ಉಲ್ಲಂಘನೆಗಾಗಿ ಗುರ್ನೂರ್ ಬ್ರಾರ್‌ಗೆ ಐಸಿಸಿ ಎಚ್ಚರಿಕೆ ನೀಡಿದೆ. ಇದರೊಂದಿಗೆ ಅವರ ಶಿಸ್ತು ದಾಖಲೆಗೆ ಒಂದು ಡಿಮೆರಿಟ್ ಪಾಯಿಂಟ್ಅನ್ನು ಸೇರಿಸಲಾಗಿದೆ.

ಇದನ್ನೂ ಓದಿ:

ತಪ್ಪೊಪ್ಪಿಕೊಂಡ ಯುವ ಬೌಲರ್

ಐಸಿಸಿ ವಿಧಿಸಿರುವ ಈ ದಂಡನೆಯನ್ನು ಗುರ್ನೂರ್ ಬ್ರಾರ್ ಒಪ್ಪಿಕೊಂಡಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಅವರು ಮತ್ತೆ ಇಂತಹ ತಪ್ಪುಗಳನ್ನು ಮರುಕಳಿಸಿದರೆ, ಅದು ಅವರ ಕ್ರಿಕೆಟ್ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಕ್ರಿಕೆಟ್ ತಜ್ಞರು ತಿಳಿಸಿದ್ದಾರೆ.

Must Read