February 23, 2026
Monday, February 23, 2026
spot_img

ಜಪಾನ್‌ನಂತೆಯೇ ಕಾಣ್ತಿದೆ ಬೆಂಗಳೂರು, ಬ್ಯೂಟಿಫುಲ್‌ ʼcherry blossomsʼಗೆ ಮನಸೋತ ಉದ್ಯಾನ ನಗರಿ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಪಾನ್‌-ಕೊರಿಯನ್‌ ವೆಬ್‌ಸೀರಿಸ್‌ ಅಥವಾ ಸಿನಿಮಾಗಳನ್ನು ನೋಡುವ ಜನರಿಗೆ ಚೆರ್ರಿ ಬ್ಲಾಸಮ್‌ ಅಂದ್ರೆ ತುಂಬಾನೇ ಇಷ್ಟ. ಈ ಸೀಸನ್‌ ಅತ್ಯಂತ ಬ್ಯೂಟಿಫುಲ್‌ ಆಗಿ ಕಾಣಿಸುತ್ತದೆ. ಆದರೆ ನಮ್ಮ ಬೆಂಗಳೂರು ಕೂಡ ಈ ದೇಶಗಳನ್ನು ಮೀರಿಸಿದೆ.

https://twitter.com/LoveNOptimism/status/2005877151891902750

ಜಪಾನ್‌, ಕೊರಿಯಾ ರೀತಿ ನಮ್ಮ ಬೆಂಗಳೂರಿನ ಬೀದಿಬೀದಿಯಲ್ಲಿಯೂ ಪಿಂಕ್‌ ಹೂವುಗಳನ್ನು ಕಾಣಬಹುದಾಗಿದೆ. ಬೆಳಗ್ಗೆ ಹಾಗೂ ಸಂಜೆ ಈ ಮರಗಳ ಬಳಿ ಓಡಾಡೋದೇ ಒಂದು ಸಂಭ್ರಮ. ಇನ್ನು ಫೋಟೊ ಪ್ರಿಯರಿಗೆ ಇದಕ್ಕಿಂತಹ ಚಂದದ ಬ್ಯಾಕ್‌ಗ್ರೌಂಡ್‌ ಬೇಕಾ?

https://twitter.com/DrParameshwara/status/1065169660662886401

ಸಾಮಾಜಿಕ ಜಾಲತಾಣದಲ್ಲಿ ಇದರ ಫೋಟೊ, ವಿಡಿಯೋಗಳು ವೈರಲ್‌ ಆಗಿವೆ.ಸದ್ಯ ಬೆಂಗಳೂರಿನಲ್ಲಿ ಹಳದಿ ಹಾಗೂ ಗುಲಾಬಿ ಬಣ್ಣದ ಹೂಗಳು ಅರಳಿ ನಿಂತ್ತಿವೆ. ಕೊಳವೆ ಆಕಾರದಲ್ಲಿ ಕಾಣುವ ಗುಲಾಬಿ ಬಣ್ಣದ ಹೂವನ್ನ ಟಬುಬಿಯಾ ರೋಸುಯಾ ಪಿಂಕ್ ಪೋಯ್‌ ಅಂತ ಕರೆಯಲಾಗಿತ್ತೆ. ಹಳದಿ ಬಣ್ಣದ ಹೂಗಳನ್ನ ಯೆಲ್ಲೋ ಟ್ರಂಪೆಟ್ ಪ್ಲವರ್ ಅಂತ ಕರೆಯಲಾಗುತ್ತೆ. ವಿಶೇಷತೆ ಅಂದರೆ ಮರದಲ್ಲಿ ಎಲೆಗಳು ವಿರಳವಾಗಿದ್ದು, ಸಂಪೂರ್ಣವಾಗಿ ಹೂಗಳಿಂದ ತುಂಬಿರುತ್ತವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !