February 23, 2026
Monday, February 23, 2026
spot_img

326 ದಿನಗಳಿಂದ ಜಾರಿಯಲ್ಲಿದ್ದ Operation Trashi-I ಸಕ್ಸಸ್‌, JEM ಉಗ್ರ ಸೈಫುಲ್ಲಾ ಎನ್‌ಕೌಂಟರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಿಶ್ತ್ವಾರ್ ಪ್ರದೇಶದಲ್ಲಿ ಬರೋಬ್ಬರಿ 326 ದಿನಗಳಿಂದ ನಡೆಯುತ್ತಿದ್ದ ಆಪರೇಷನ್‌ ತ್ರಾಶಿ-I ಕಾರ್ಯಾಚರಣೆ ಯಶಸ್ವಿಯಾಗಿ ಮುಕ್ತಾಯವಾಗಿದೆ.

ಚತ್ರೂ ಅರಣ್ಯಪ್ರದೇಶದಲ್ಲಿ ಭಾರತೀಯ ಸೇನಾಪಡೆ ಜೈಷ್‌-ಎ- ಮೊಹಮ್ಮದ್‌ ಸಂಘಟನೆಯ ಟಾಪ್‌ ಕಮಾಂಡರ್‌ ಸೈಫುಲ್ಲಾ ಸೇರಿದಂತೆ ಏಳು ಉಗ್ರರನ್ನು ಹತ್ಯೆ ಮಾಡಿದೆ.

ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನೆಪಡೆಗಳು ಕಿಶ್ತ್ವಾರ್‌ನ ಛತ್ರೂ ಅರಣ್ಯದ ಪಾಸರ್‌ಕುಟ್ ಪ್ರದೇಶದಲ್ಲಿ ಆಪರೇಷನ್ ಟ್ರಾಶಿ-I ಕಾರ್ಯಾಚರಣೆ ಆರಂಭಿಸಿತ್ತು, ಭಾನುವಾರ ನಡೆದ ಎನ್‌ಕೌಂಟರ್‌ನಲ್ಲಿ ಜೆಇಎಂ ಟಾಪ್ ಕಮಾಂಡರ್ ಸೈಫುಲ್ಲಾ ಸೇರಿದಂತೆ ಮೂವರು ಪಾಕಿಸ್ತಾನಿ ಉಗ್ರರನ್ನು ಹತ್ಯೆ ಮಾಡಿದೆ.

ಜಮ್ಮು-ಕಾಶ್ಮೀರದಲ್ಲಿ ಕಳೆದ ಐದು ವರ್ಷಗಳಿಂದ ಸಕ್ರಿಯವಾಗಿದ್ದ ಸೈಫುಲ್ಲಾ, ಭದ್ರತಾ ಪಡೆಗಳ ಮೇಲೆ ನಡೆದ ಹಲವಾರು ದಾಳಿಯಲ್ಲಿ ಭಾಗಿಯಾಗಿದ್ದ.

2024ರ ಜುಲೈನಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸೈನಿಕರು ಮೃತಪಟ್ಟಿದ್ದ ಪ್ರಕರಣದಲ್ಲೂ ಈತ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !