April 14, 2026
Tuesday, April 14, 2026
spot_img

ಚಲಿಸುತ್ತಿದ ಕಾರಿನ ಮೇಲೆ ಉರುಳಿ ಬಿದ್ದ ಮರ: ಅಪಾಯದಿಂದ ಪಾರಾದ ಬ್ಯಾಂಕ್ ಸಿಬ್ಬಂದಿಗಳು!

ಹೊಸದಿಗಂತ ವರದಿ,ಸುಳ್ಯ:

ಬ್ಯಾಂಕ್ ಸಿಬ್ಬಂದಿಗಳು ಚಲಿಸುತ್ತಿದ ಕಾರಿನ ಮೇಲೆ ಮರ ಉರುಳಿ ಬಿದ್ದು ಪವಾಡ ಸದೃಷವಾಗಿ ಪರಾದ ಘಟನೆ ಸುಳ್ಯ ಬೆಳ್ಳಾರೆ ರಸ್ತೆಯ ಬೇಂಗಮಲೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.

ಉಮ್ಮರ್ ಎಂಬುವವರ ಕಾರಿನಲ್ಲಿ ಸುಳ್ಯ ಸ್ಟೇಟ್ ಬ್ಯಾಂಕ್ ವ್ಯವಸ್ಥಾಪಕ ಉತ್ಸವ್ ಚಕ್ರವರ್ತಿ ಹಾಗೂ ಇನ್ನೋರ್ವ ಫೀಲ್ಡ್ ಸ್ಟಾಫ್ ಸಾಲ ವಸೂಲಾತಿಗಾಗಿ ಬಾಡಿಗೆ ಕಾರಲ್ಲಿ ಪಂಜ ಕಡೆಗೆ ಹೋಗಿ ಬೆಳ್ಳಾರೆಯಿಂದ ಸುಳ್ಯಕ್ಕೆ ವಾಪಸ್ಸಾಗುತ್ತಿದ್ದ ವೇಳೆಯಲ್ಲಿ ಬೇಂಗಮಲೆ ಎಂಬಲ್ಲಿ ರಸ್ತೆಬದಿಯಲ್ಲಿದ್ದ ಮರವೊಂದ ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಪರಿಣಾಮ ಕಾರು ನುಜ್ಜುಗುಜ್ಜಾಗಿದ್ದು ಕಾರಲ್ಲಿ ಪ್ರಯಾಣಿಸುತ್ತಿದ್ದವರು .

ಪವಾಡಸದೃಶವಾಗಿ ಪಾರಾಗಿದ್ದು ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡು ಬಳಿಕ ಸ್ಥಳೀಯರ ಸಹಾಯದಿಂದ ಮರವನ್ನು ತೆರವುಗೊಳಿಸಿ ಬ್ಯಾಂಕ್ ಸಿಬ್ಬಂದಿಗಳನ್ನು ಸುಳ್ಯಕ್ಕೆ ಕಳುಹಿಸಿಕೊಡಲಾಯಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !