September 28, 2026
Monday, September 28, 2026
spot_img

‘ದಿ ವೆಡ್ಡಿಂಗ್ ಆಫ್ ವಿರೋಷ್’: ಉದಯಪುರದಲ್ಲಿ ಮಹೆಂದಿ, ಹಳದಿ , ಸಂಗೀತ್ ಸೆರೆಮನಿ ಗೌಜಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಉದಯಪುರದಲ್ಲಿ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಮದುವೆ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿದ್ದು, ಇಲ್ಲಿನ ಐಷಾರಾಮಿ ಐಟಿಸಿ ಮೆಮೆಂಟೋಸ್ ನಲ್ಲಿ ಜೋಡಿ ತಮ್ಮ ಎಲ್ಲಾ ವಿವಾಹಪೂರ್ವ ಮತ್ತು ವಿವಾಹ ಸಮಾರಂಭಗಳನ್ನು ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ಇಂದು ಆತ್ಮೀಯ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿಮೆಹಂದಿ ಸಮಾರಂಭವು ನಡೆಯಲಿದ್ದು, ಹಲ್ದಿ ಮತ್ತು ಸಂಗೀತ ಸಮಾರಂಭವು ಮರುದಿನ, ಫೆಬ್ರವರಿ 25, 2026 ರಂದು ನಡೆಯಲಿದೆ.

ಈ ಎಲ್ಲ ಸಮಾರಂಭಗಳು ಖಾಸಗಿಯಾಗಿ ಮತ್ತು ಬಿಗಿ ಭದ್ರತೆಯಲ್ಲಿ ನಡೆಯಲಿದ್ದು, ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಒಟ್ಟು 100 ಮಂದಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈ ಪೈಕಿ 50 ಮಂದಿ ಉಭಯ ಕುಟುಂಬದ ಸದಸ್ಯರು ಹಾಗೂ ಇನ್ನುಳಿದ 50 ಮಂದಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಆಪ್ತರು, ಗಣ್ಯರಿಗೆ ಆಹ್ವಾನ ನೀಡಲಾಗಿದೆ.

ಮದುವೆ ಉದಯಪುರದಲ್ಲಿ ನಡೆದರೆ, ರೆಸೆಪ್ಶನ್ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ನಡೆಯಲಿದೆ. ಇನ್ನು ಚಿತ್ರರಂಗದ ಸೆಲೆಬ್ರೆಟಿಗಳು, ರಾಜಕೀಯ ನಾಯಕರು ಸೇರಿದಂತೆ ಗಣ್ಯರನ್ನು ಮಾರ್ಚ್ ನಾಲ್ಕರ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.

Must Read