February 25, 2026
Wednesday, February 25, 2026
spot_img

ಟರ್ಕಿ ವಾಯುಪಡೆಗೆ ಸೇರಿದ F-16 ಯುದ್ಧವಿಮಾನ ಪತನ, ಪೈಲಟ್‌ ಸಜೀವ ದಹನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಟರ್ಕಿಯ ವಾಯುಪಡೆಯ ಯುದ್ಧವಿಮಾನವೊಂದು ಪತನವಾಗಿದ್ದು, ಪೈಲಟ್‌ ಸಜೀವ ದಹನವಾಗಿದ್ದಾರೆ.

ನಿನ್ನೆ ತಡರಾತ್ರಿ ಅಮೆರಿಕ ನಿರ್ಮಿತವಾದ ಎಫ್-16 ಯುದ್ಧ ವಿಮಾನ ಪತನಗೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಮಾನ ಪತನದ ವಿಡಿಯೋಗಳು ವೈರಲ್‌ ಆಗಿವೆ.

ವಿಮಾನ ಪತನಗೊಂಡ ನಂತರ ಭಾರೀ ಸ್ಫೋಟವಾಗಿದ್ದು, ಪೈಲಟ್‌ ಮೃತಪಟ್ಟಿದ್ದಾರೆ. ಬಲಿಕೇಸಿರ್‌ ನಗರದ ಬುರ್ಸಾ-ಇಜ್ಮಿರ್‌ ಹೆದ್ದಾರಿಯ ಬಳಿ ಪತನವಾಗಿದ್ದು, ತಕ್ಷಣವೇ ಪೊಲೀಸರು ಆಂಬುಲೆನ್ಸ್‌ ಜತೆ ಸ್ಥಳಕ್ಕೆ ಬಂದಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !