September 27, 2026
Sunday, September 27, 2026
spot_img

ಕಾಡಲ್ಲಿ ಅಲೆದು ಬೋರ್‌ ಆಯ್ತು, ಚಿಕ್ಕಮಗಳೂರು ಸಿಟಿ ರೌಂಡ್ಸ್‌ ಹಾಕೋಕೆ ರೆಡಿಯಾದ ಆನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಡಲ್ಲಿ ಅಲೆದು ಅಲೆದು ಬೋರಾದ ಕಾಡಾನೆಗಳು ಸದ್ಯ ಚಿಕ್ಕಮಗಳೂರು ಸಿಟಿ ಸಮೀಪದಲ್ಲೇ ಕಾಣಿಸಿಕೊಂಡಿವೆ.ಚಿಕ್ಕಮಗಳೂರಿನಿಂದ ಕೇವಲ ಐದು ಕಿ.ಮೀ ದೂರದಲ್ಲಿ ಇರುವ ಮತ್ತಾವರ ಗ್ರಾಮದ ಆಸುಪಾಸಿನಲ್ಲಿ ಕಾಡಾನೆಗಳು ಬೀಡು ಬಿಟ್ಟಿವೆ.

ಸಿಟಿಯಲ್ಲಿದ್ದ ಜನ ತಾವು ಸೇಫ್‌ ಎಂದುಕೊಂಡಿದ್ದರು. ಆದರೆ ಕಾಡಾನೆಗಳು ಇನ್ನೇನು ಹತ್ತಿರದಲ್ಲೇ ಇವೆ ಎನ್ನುವ ಸುದ್ದಿ ಕೇಳಿ ಜನ ಹೆದರಿದ್ದಾರೆ.

ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಕ್ಷರಶಃ ಮಲೆನಾಡಿಗರ ನೆಮ್ಮದಿ ಕೆಡಿಸಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಗಜಪಡೆಗಳ ಸಂಚಾರ ಮಿತಿಮೀರಿದ್ದು, ಕಾಫಿ ತೋಟದ ಕಾರ್ಮಿಕರು ಹಾಗೂ ಸ್ಥಳೀಯ ನಿವಾಸಿಗಳು ಪ್ರತಿ ಕ್ಷಣವೂ ಆತಂಕದಲ್ಲೇ ಬದುಕುವಂತಾಗಿದೆ.

ಕಾಫಿ ಎಸ್ಟೇಟ್‌ನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಎಸ್ಟೇಟ್‌ನಲ್ಲಿ ಕೆಲಸ ಮಾಡೋದಕ್ಕೆ ಜನ ಭಯಪಟ್ಟಿದ್ದಾರೆ. ಇವುಗಳನ್ನು ಹಿಡಿದು ಮತ್ತೆ ಕಾಡಿಗೆ ಅಟ್ಟಿ ಎಂದು ಮನವಿ ಮಾಡಿದ್ದಾರೆ.

Must Read