September 27, 2026
Sunday, September 27, 2026
spot_img

VIROSH |ಎರಡೂ ಕುಟುಂಬಕ್ಕೆ ಗೌರವ ಕೊಡಬೇಕೆಂದು ಎರಡು ಬಾರಿ ಮದುವೆಯಾಗ್ತಿದ್ದಾರೆ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ ದೇವರಕೊಂಡ ವಿವಾಹ ನಾಳೆ ನೆರವೇರಲಿದೆ. ಇಂದು ಮೆಹೆಂದಿ ಶಾಸ್ತ್ರ ಹಾಗೂ ಸಂಗೀತ್‌ ಕಾರ್ಯಕ್ರಮ ನಡೆಯಲಿದೆ.

ಉದಯಪುರದ ಗ್ರಾಂಡ್‌ ಪ್ಯಾಲೇಸ್‌ ಒಂದರಲ್ಲಿ ಇಬ್ಬರ ಮದುವೆ ನಡೆಯಲಿದೆ. ತೆಲುಗು ಸಂಪ್ರದಾಯದಂತೆ ನಾಳೆ ಬೆಳಗ್ಗೆ ರಶ್ಮಿಕಾ ಹಾಗೂ ವಿಜಯ್‌ ಹಸೆಮಣೆ ಏರಲಿದ್ದಾರೆ. ಇನ್ನು ರಶ್ಮಿಕಾ ಕುಟುಂಬದ ರೀತಿ ಕೂರ್ಗಿ ಸಂಪ್ರದಾಯದಲ್ಲಿ ನಾಳೆ ಸಂಜೆ ಮದುವೆ ನೆರವೇರಲಿದೆ.

ಎರಡೂ ಕುಟುಂಬದವರ ಖುಷಿಗಾಗಿ ಹಾಗೂ ಗೌರವ ನೀಡುವ ಸಲುವಾಗಿ ಎರಡು ಬಾರಿ ಮದುವೆ ನೆರವೇರಲಿದೆ. ಎರಡೂ ಕಡೆಯ ಸಂಪ್ರದಾಯ ಇಬ್ಬರಿಗೂ ಹೊಸತು. ಆದರೆ ಇಬ್ಬರೂ ಅದನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದು, ಅದ್ಧೂರಿ ಮದುವೆ ನೆರವೇರಲಿದೆ.

ನೂರು ಜನ ಗೆಸ್ಟ್‌ಗಳನ್ನು ಮಾತ್ರ ಮದುವೆಗೆ ಕರೆದಿದ್ದು,ಇದರಲ್ಲಿ ಆತ್ಮೀಯರು ಹಾಗೂ ಸ್ನೇಹಿತರು ಮಾತ್ರ ಇದ್ದಾರೆ. ನಾಳೆ ಸಂಜೆ ವೇಳೆಗೆ ಮದುವೆಯ ಫೋಟೊ ವಿಡಿಯೋಗಳು ಅಪ್‌ಲೋಡ್‌ ಆಗಬಹುದು ಎಂದು ಕಾಯಲಾಗುತ್ತಿದೆ.

Must Read