February 26, 2026
Thursday, February 26, 2026
spot_img

ಇಂದು ರಶ್ಮಿಕಾ ಮಂದಣ್ಣ ದೇವರಕೊಂಡ ಆಗಲಿದ್ದಾರೆ ನ್ಯಾಷನಲ್‌ ಕ್ರಶ್‌! ಒಂದಾದ್ರು ಫೋಟೊ ಲೀಕ್‌ ಮಾಡಿ ಅಂತಿದ್ದಾರೆ ಫ್ಯಾನ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏಳೆಂಟು ವರ್ಷದ ಪ್ರೀತಿಯ ನಂತರ ಇದೀಗ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಪತಿ ಪತ್ನಿಯಾಗಲಿದ್ದಾರೆ. ಇಂದು ಬೆಳಗ್ಗೆ ಎಂಟು ಗಂಟೆಯಿಂದ ತೆಲುಗು ಸಂಪ್ರದಾಯದಂತೆ ಮದುವೆ ನೆರವೇರುತ್ತಿದೆ. ಸಂಜೆ ಕೊಡವ ಸಂಪ್ರದಾಯದಂತೆ ಇನ್ನೊಮ್ಮೆ ಮದುವೆಯಾಗಲಿದೆ.

ಎರಡೂ ಕುಟುಂಬ ಬೇರೆ ಬೇರೆ ಸಂಪ್ರದಾಯದಿಂದ ಬಂದ ಕಾರಣ ಎರಡು ಬಾರಿ ಮದುವೆಗೆ ನಿರ್ಧಾರ ಮಾಡಲಾಗಿದೆ. ಈಗಾಗಲೇ ನಿನ್ನೆ ಅರಿಶಿಣ ಶಾಸ್ತ್ರ ಹಾಗೂ ಸಂಗೀತ್‌ ಕಾರ್ಯಕ್ರಮ ನಡೆದಿದೆ. ಮುಖಗಳು ಕಾಣದಂತೆ ಸೆಟಪ್‌ನ ಫೋಟೊ ಮಾತ್ರ ರಶ್ಮಿಕಾ ಹಾಗೂ ವಿಜಯ್‌ ಅಪ್‌ಲೋಡ್‌ ಮಾಡಿದ್ದಾರೆ.

ಇಂದು ಮದುವೆ ನೆರವೇರಲಿದೆ, ಸಂಜೆಯ ಮದುವೆ ಆದ ನಂತರ ನಾಳೆ ಫೋಟೊ ಅಪ್‌ಲೋಡ್‌ ಮಾಡುವ ಸಾಧ್ಯತೆ ಇದೆ. ರಶ್ಮಿಕಾ ಹೇಗೆ ಕಾಣ್ತಿದ್ದಾರೆ, ಮದುವೆ ಹೇಗೆ ಆಗ್ತಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದ್ದು, ಒಂದಾದ್ರೂ ಫೋಟೊ ಅಪ್‌ಲೋಡ್‌ ಮಾಡಿ ಎಂದು ಮನವಿ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !