ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನೆರಡು ದಿನದಲ್ಲಿ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಲಿದೆ, ಪರೀಕ್ಷೆಗೆ ಎರಡೇ ದಿನ ಇರುವಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಪತ್ನಿಕೆ ಬೇಕಾದ್ರೆ ಡಿಎಮ್ ಮಾಡಿ ಎನ್ನುವ ಸಂದೇಶ ಹರಿದಾಡುತ್ತಿದೆ.
ಇನ್ಸ್ಟಾಗ್ರಾಮ್‌ನಲ್ಲಿ ಡಾ. ಕನ್ನಡಿಗ ಎನ್ನುವ ಖಾತೆಯಿಂದ ಈ ಸಂದೇಶ ಬಂದಿದೆ. ಪ್ರಶ್ನೆ ಪತ್ನಿಗೆ ಮಾರಾಟಕ್ಕಿದೆ, ಬೇಕಾದ್ರೆ ಮೆಸೇಜ್ ಮಾಡಿ. ಯಾವ ಸಬ್ಜೆಕ್ಟ್ ಬೇಕು ಅದೇ ಕೊಡ್ತೀನಿ, ಆಮೇಲೆ ದುಡ್ಡು ಎಷ್ಟು ಅಂತ ಹೇಳ್ತೀನಿ ಎಂದು ಮೆಸೇಜ್ ಮಾಡಿದ್ದಾರೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಹುದೇ ಎಂಬ ಭಯದಲ್ಲಿದ್ದಾರೆ. ಆದರೆ, ಈ ಕಿಡಿಗೇಡಿ ಯಾವ ವಿಷಯದ ಪ್ರಶ್ನೆ ಪತ್ರಿಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.
ಪರೀಕ್ಷೆಯ ಸಮಯದಲ್ಲಿ ಇಂತಹ ಕಿಡಿಗೇಡಿಗಳು ಹಣ ಮಾಡುವ ಉದ್ದೇಶದಿಂದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಥವಾ ನಕಲಿ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚು. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬೇಡಿ ಮತ್ತು ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಇಲಾಖೆ ಹೇಳಿದೆ.



