July 18, 2026
Saturday, July 18, 2026
spot_img

ಶಾಲೆಗೆ ಹೋದ ಮಗಳು ಹೆಣವಾಗಿ ಮರಳಿದಳು: 9 ವರುಷದ ಬಾಲಕಿ ಹೃದಯಾಘಾತಕ್ಕೆ ಬಲಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಾಲಾ ಮೈದಾನದಲ್ಲಿ ಗೆಳೆಯರೊಂದಿಗೆ ನಗುನಗುತ್ತಾ ಆಟವಾಡುತ್ತಿದ್ದ ಬಾಲಕಿಯೊಬ್ಬಳು ಕ್ಷಣಾರ್ಧದಲ್ಲಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯ ಗೋಟನ್‌ನಲ್ಲಿ ನಡೆದಿದೆ.

ಐದನೇ ತರಗತಿ ವಿದ್ಯಾರ್ಥಿನಿ ದಿವ್ಯಾ (9) ಮೃತಪಟ್ಟ ದುರ್ದೈವಿ. ಕೇವಲ ನಾಲ್ಕು ತಿಂಗಳ ಹಿಂದೆಯಷ್ಟೇ ಈಕೆಯ ಅಣ್ಣ ಕೂಡ ಇದೇ ರೀತಿ ನಿಗೂಢವಾಗಿ ಮೃತಪಟ್ಟಿದ್ದನು.

ಫೆಬ್ರವರಿ 23ರಂದು ಬೆಳಗ್ಗೆ ಶಾಲೆಯಲ್ಲಿ ಪ್ರಾರ್ಥನೆಗೂ ಮುನ್ನ ದಿವ್ಯಾ ಮೈದಾನದಲ್ಲಿ ಆಟವಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತೆ ಆಕೆ ಕುಸಿದುಬಿದ್ದಿದ್ದಾಳೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಗಳಲ್ಲಿ ಆಕೆ ಓಡುತ್ತಾ ಬಂದು ದಿಢೀರನೆ ಪ್ರಜ್ಞೆ ತಪ್ಪಿ ಬೀಳುವುದು ಕಂಡುಬಂದಿದೆ. ತಕ್ಷಣ ಶಾಲಾ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರೂ, ಅಷ್ಟರಲ್ಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.

ಈ ಕುಟುಂಬಕ್ಕೆ ವಿಧಿ ಆಡುತ್ತಿರುವ ಆಟ ನಿಜಕ್ಕೂ ಕ್ರೂರವಾಗಿದೆ. ಕಳೆದ ಸೆಪ್ಟೆಂಬರ್ 9, 2025 ರಂದು ದಿವ್ಯಾಳ ಅಣ್ಣ ಅಭಿಷೇಕ್ ಸಹ ಮನೆಯಲ್ಲಿ ಆಟವಾಡುತ್ತಿದ್ದಾಗ ಇದೇ ರೀತಿ ದಿಢೀರನೆ ಕುಸಿದುಬಿದ್ದು ಪ್ರಾಣ ಕಳೆದುಕೊಂಡಿದ್ದನು. ನಾಲ್ಕು ತಿಂಗಳ ಅಂತರದಲ್ಲಿ ಇಬ್ಬರು ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !