February 27, 2026
Friday, February 27, 2026
spot_img

ದಿನಭವಿಷ್ಯ: ಹಿಡಿದ ಕೆಲಸ ಅಚ್ಚುಕಟ್ಟಾಗಿ ಪೂರೈಸಿ, ಅನಿರೀಕ್ಷಿತ ಧನಲಾಭ

ಮೇಷ
ಎಲ್ಲ ಸುಸೂತ್ರವಾಗಿ ಸಾಗುವುದು. ಆದರೆ ಸಂಗಾತಿ ಜತೆ ಭಿನ್ನಮತ. ಇತರರ ಟೀಕಿಸದಿರಿ. ನಿಮ್ಮ ನಡೆನುಡಿ ಪರಾಮರ್ಶಿಸಿ. ನಿಮ್ಮಲ್ಲೇ ತಪ್ಪಿರಬಹುದು.
ವೃಷಭ
ಹೆಚ್ಚು ಹೊಣೆ ನಿಮ್ಮ ಮನೆಯಲ್ಲೂ, ವೃತ್ತಿಯಲ್ಲೂ. ಹಿಡಿದ ಕೆಲಸ ಅಚ್ಚುಕಟ್ಟಾಗಿ ಪೂರೈಸಿ. ಟೀಕೆಗೆ ಆಸ್ಪದ ಕೊಡಬೇಡಿ. ವಾಗ್ವಾದ ನಡೆಸದಿರಿ.
ಮಿಥುನ
ಹರ್ಷದ ದಿನ. ಪ್ರೀತಿಪಾತ್ರರ ಜತೆ ಆತ್ಮೀಯ ಕಾಲಕ್ಷೇಪ. ಹಳೆ ನಿರ್ಧಾರವೊಂದು ಈಗ ಕೆಟ್ಟ ಫಲ ನೀಡಬಹುದು. ಎಚ್ಚರದ ನಡೆಯಿರಲಿ.
ಕಟಕ
ಆರಂಭದಲ್ಲಿ ಹಿನ್ನಡೆಯಾಗಿ ಕಂಡ ವಿಷಯ ಬಳಿಕ ನಿಮ್ಮ ಪಾಲಿಗೆ ಒಳಿತು ತಂದೀತು. ಅನಿರೀಕ್ಷಿತ ಧನಲಾಭ. ಹಳೆಯ ಸ್ನೇಹಿತರ ಭೇಟಿ.
ಸಿಂಹ
ವೃತ್ತಿಯ ಒತ್ತಡ ಹೆಚ್ಚು. ಹಾಗೆಂದು ಕೌಟುಂಬಿಕ ವ್ಯವಹಾರ ಕಡೆಗಣಿಸಬೇಡಿ. ಕುಟುಂಬಸ್ಥರ ಬೇಡಿಕೆಗೆ ಕಿವಿಗೊಡಿ. ಧನವ್ಯಯ.
ಕನ್ಯಾ
ಬಾಕಿ ಇದ್ದ ಕೆಲಸ ಮುಗಿಸಲು ಸಫಲ. ಆಪ್ತರ ಜತೆ ಮುನಿಸು ಸಂಭವ. ಸಮಾಧಾನದಿಂದ ವ್ಯವಹರಿಸಿ. ಮುನಿಸು ತಣಿಸಿ. ಖರ್ಚು ಹೆಚ್ಚಳ.
ತುಲಾ
ಪ್ರತಿಕೂಲ ಪರಿಸ್ಥಿತಿ ಉದ್ಭವಿಸಿದರೂ ಪಾಸಿಟಿವ್ ಚಿಂತನೆ ಬಿಡಬೇಡಿ. ವಿಳಂಬವಾದರೂ ಉದ್ದೇಶ ಸಾಧಿತವಾಗಲಿದೆ. ಆರ್ಥಿಕ ಪರಿಸ್ಥಿತಿ ತೃಪ್ತಿಕರ.
ವೃಶ್ಚಿಕ
ಆತ್ಮೀಯರ ಸಂಗಡ ಕಾಲ ಕಳೆಯುತ್ತಾ ಇನ್ನಿತರ ಉದ್ವಿಗ್ನತೆ ಮರೆಯುವಿರಿ. ಆದರೆ ಕೆಲಸ ಬಾಕಿ ಉಳಿಸದಿರಿ. ಅದನ್ನು ಪೂರೈಸಿ. ಬಂಧು ಭೇಟಿ.
ಧನು
ಸ್ವ-ಪರಾಮರ್ಶೆ ನಡೆಸಿ. ನಿಮ್ಮ ಕೆಲವಾರು ಪ್ರಶ್ನೆಗಳಿಗೆ ಉತ್ತರ ಸಿಗಬಹುದು. ನಿಮ್ಮ ಲೋಪ ಮುಚ್ಚಿ ಹಾಕಲು ಪ್ರಯತ್ನಿಸಬೇಡಿ.
ಮಕರ
ಅಭದ್ರತೆಯ ಭಾವ ಕಾಡಬಹುದು. ಕೆಲವು ಬೆಳವಣಿಗೆ ಮನಸ್ಸಿಗೆ ಅಹಿತಕಾರಿಯಾದೀತು. ಭಾವುಕ ಸನ್ನಿವೇಶಕ್ಕೆ ಸಾಕ್ಷಿಯಾಗುವಿರಿ.
ಕುಂಭ
ಕೌಟುಂಬಿಕ ಹೊಣೆ ಹೆಚ್ಚಳ. ಒಬ್ಬರ ವರ್ತನೆ ನಿಮಗೆ ಅಸಹನೀಯ ಎನ್ನಿಸೀತು. ಸಂಘರ್ಷ ಬೇಡ, ಹೊಂದಾಣಿಕೆಯ ವರ್ತನೆಯ ಒಳ್ಳೆಯದು.
ಮೀನ
ನಿರೀಕ್ಷಿತ ಉದ್ದೇಶ ಪೂರ್ತಿಯಾಗದು. ಆರೋಗ್ಯ ಸಮಸ್ಯೆ. ಕೆಲಸದಲ್ಲಿ ಸಣ್ಣ ಲೋಪ ಉಂಟಾದೀತು. ಅದನ್ನು ಕಡೆಗಣಿಸದಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !