February 28, 2026
Saturday, February 28, 2026
spot_img

CINE | ಟಾಕ್ಸಿಕ್ ನ ಮತ್ತೊಂದು ಖತರ್ನಾಕ್ ಕ್ಯಾರೆಕ್ಟರ್ ರಿವೀಲ್: ಹಾಲಿವುಡ್ ನಟ ಡ್ಯಾರೆಲ್ ಡಿ’ಸಿಲ್ವಾ ಎಂಟ್ರಿ

‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಪ್ರಮುಖ ಪಾತ್ರವನ್ನು ನಟ ಯಶ್ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಈ ಬಾರಿ ಭಾರತೀಯ ನಟರಲ್ಲ, ಹಾಲಿವುಡ್ ಹಿನ್ನೆಲೆಯ ಕಲಾವಿದ ಡ್ಯಾರೆಲ್ ಡಿ’ಸಿಲ್ವಾ ಚಿತ್ರತಂಡಕ್ಕೆ ಸೇರ್ಪಡೆಯಾಗಿರುವುದು ವಿಶೇಷ.

‘ಸಾಲ್ವಡಾರ್’ ಎಂಬ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಪೋಸ್ಟರ್‌ನಲ್ಲಿ ಅವರ ಸ್ಟೈಲಿಷ್ ಲುಕ್ ಗಮನ ಸೆಳೆದಿದೆ.

ಈ ಪಾತ್ರ ಧನಾತ್ಮಕವೇ ಅಥವಾ ಪ್ರತಿನಾಯಕನದೇ ಎಂಬುದನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ. ಆದರೆ ಪೋಸ್ಟರ್ ನೋಡಿದರೆ ಗಂಭೀರ ಮತ್ತು ಪ್ರಭಾವಶಾಲಿ ವ್ಯಕ್ತಿತ್ವದ ಸೂಚನೆ ಸಿಗುತ್ತದೆ. ಡ್ಯಾರೆಲ್ ಡಿ’ಸಿಲ್ವಾ ರಂಗಭೂಮಿ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ನಟರು. ‘ರಾಯಲ್ ಶೇಕ್ಸ್‌ಪಿಯರ್ ಕಂಪನಿ’ ಮೂಲಕ ಶೇಕ್ಸಿಪಿಯರ್ ನಾಟಕಗಳಲ್ಲಿ ಅಭಿನಯಿಸಿ ಮೆಚ್ಚುಗೆ ಪಡೆದಿದ್ದಾರೆ. ‘ಆಂಟೋನಿ ಅಂಡ್ ಕ್ಲಿಯೋಪಾತ್ರ’ ಹಾಗೂ ‘ಜೂಲಿಯಸ್ ಸೀಸರ್’ ನಾಟಕಗಳಲ್ಲಿ ಅವರ ಅಭಿನಯ ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ:

ರಂಗಭೂಮಿಯ ಜೊತೆಗೆ ಬ್ರಿಟಿಷ್ ಟಿವಿ ಸರಣಿಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ಗಂಭೀರ ಧ್ವನಿ ಮತ್ತು ಬಲಿಷ್ಠ ವ್ಯಕ್ತಿತ್ವದಿಂದ ಆ್ಯಕ್ಷನ್ ಪಾತ್ರಗಳಲ್ಲಿ ಹೆಚ್ಚು ಮಿಂಚಿದ್ದಾರೆ.

ಈಗಾಗಲೇ ‘ಟಾಕ್ಸಿಕ್’ ಚಿತ್ರದ ಟೋನಿ, ಕರ್ಮಾಡಿ ಮತ್ತು ಭೀರ ಪಾತ್ರಗಳು ರಿವೀಲ್ ಆಗಿದ್ದು, ಈಗ ‘ಸಾಲ್ವಡಾರ್’ ಎಂಟ್ರಿ ಕುತೂಹಲ ಹೆಚ್ಚಿಸಿದೆ. ಯಶ್ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಈ ಪೋಸ್ಟರ್ ಹಂಚಿಕೊಂಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !