February 27, 2026
Friday, February 27, 2026
spot_img

ಕ್ರಿಕೆಟಿಗ ರಿಂಕು ಸಿಂಗ್‌ ತಂದೆ ಖಚಂದ್ರ ಸಿಂಗ್‌ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟಿಗ ರಿಂಕು ಸಿಂಗ್‌ ಅವರ ತಂದೆ ಖಚಂದ್ರ ಸಿಂಗ್‌ ನಿಧನರಾಗಿದ್ದಾರೆ. ಯಕೃತ್ತಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಂಕು ಸಿಂಗ್‌ ಅವರ ತಂದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ತಂದೆ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ತುರ್ತಾಗಿ ರಿಂಕು ಸಿಂಗ್‌ ವಿಶ್ವಕಪ್‌ ಟೂರ್ನಿ ಮಧ್ಯೆ ತಮ್ಮ ಮನೆಗೆ ತೆರಳಿದ್ದರು. ಗುರುವಾರ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಬದಲಿ ಫೀಲ್ಡರ್‌ ಆಗಿ ಆಡಿದ್ದರು. ಇತ್ತೀಚೆಗೆ ಖಚಂದ್ರ ಸಿಂಗ್‌ ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು,ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಿಯಾಗದೇ ಅವರು ಮೃತಪಟ್ಟಿದ್ದಾರೆ. ರಿಂಕು ಅವರ ತಂದೆಯ ನಿಧನಕ್ಕೆ ಟೀಮ್‌ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಸಂತಾಪ ಸೂಚಿಸಿದ್ದಾರೆ. ರಿಂಕು ಸಿಂಗ್ ಅವರ ತಂದೆ ಶ್ರೀ ಖಾನ್‌ಚಂದ್ ಸಿಂಗ್ ಜಿ ಅವರ ನಿಧನದ ಸುದ್ದಿ ಕೇಳಿ ತುಂಬಾ ನೋವಾಯಿತು. ಟಿ20 ವಿಶ್ವಕಪ್‌ನಲ್ಲಿ ತಮ್ಮ ಜವಾಬ್ದಾರಿಗಳಿಗೆ ಬದ್ಧರಾಗಿರುವ ರಿಂಕು ಮತ್ತು ಅವರ ಕುಟುಂಬಕ್ಕೆ ಇದು ವಿಶೇಷವಾಗಿ ಕಷ್ಟಕರ ಸಮಯ. ನಿಮಗೆ ದೇವರು ಶಕ್ತಿ ಕೊಡಲಿ ಎಂದು ಟ್ವೀಟ್‌ ಮಾಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !