ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕನ್ನಡ ಕೇರಳ ಗಡಿ ಭಾಗದ ತಲಪಾಡಿಯಲ್ಲಿ ಗುರುವಾರ ಮಧ್ಯಾಹ್ನ ಬಸ್ ಡಿಕ್ಕಿಯಾಗಿ ಸಾನ್ನಪ್ಪಿದ ದುರ್ದೈವಿಗಳ ಗುರುತು ಪತ್ತೆಯಾಗಿದ್ದು, ಮೃತರನ್ನು ಅಜ್ಜಿನಡ್ಕ ನಿವಾಸಿ ಖತೀಜ (60) ಅವರ ತಂಗಿ ನಪೀಸ( 52) , ಖತೀಜ ಅವರ ಅಣ್ಣನ ಮಗಳು ಹಸೀನ (13) ತಂಗಿಯ ಮಗಳು ಆಯಿಷ ಫಿದಾ (19) ಖತೀಜ ಅವರ ಮನೆಗೆ ಬಂದಿದ್ದ ಸಂಬಂಧಿ ಹವ್ವಮ್ಮ (70) ಮತ್ತು ಅಜ್ಜಿನಡ್ಕದ ರಿಕ್ಷಾ ಚಾಲಕ ಹೈದರ್ ಆಲಿ (47) ಎಂದು ಗುರುತಿಸಲಾಗಿದೆ.
ಖತೀಜ ಅವರು ಆಟೋ ರಿಕ್ಷಾದಲ್ಲಿ ಮಂಜೇಶ್ವರದ ಸಂಬಂಧಿಗಳ ಮನೆಗೆ ತೆರಳುತ್ತಿದ್ದರು. ಈ ವೇಳೆ ಬ್ರೇಕ್ ವೈಫಲ್ಯಕ್ಕೊಳಗಾದ ಬಸ್ ಡಿಕ್ಕಿಯಾಗಿದೆ.