June 25, 2026
Thursday, June 25, 2026
spot_img

ಮಾರ್ಚ್‌ನಲ್ಲಿ ನಡೆಯೋ ರಿಸೆಪ್ಷನ್‌ಗೆ ಪ್ರಧಾನಿ ಮೋದಿ, ಅಮಿತ್‌ ಶಾಗೆ ಆಹ್ವಾನ ಕೊಟ್ಟ ರಶ್ಮಿಕಾ-ವಿಜಯ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ನಿನ್ನೆಯಷ್ಟೇ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಉದಯಪುರದ ರೆಸಾರ್ಟ್‌ನಲ್ಲಿ ನೂರು ಮಂದಿಯ ಮಧ್ಯೆ ವಿರೋಷ್‌ ಕಲ್ಯಾಣ ನಡೆದಿದೆ. ಸಿನಿ ದಿಗ್ಗಜರನ್ನು ಮದುವೆಗೆ ಕರೆದಿಲ್ಲ, ಹೀಗಾಗಿ ಮಾರ್ಚ್‌ನಲ್ಲಿ ಹೈದರಾಬಾದ್‌ನಲ್ಲಿ ನಡೆಯುವ ರಿಸೆಪ್ಷನ್‌ಗೆ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗಿದೆ.

ಅಂತೆಯೇ ರಶ್ಮಿಕಾ ಹಾಗೂ ವಿಜಯ್‌ ಪ್ರಧಾನಿ ಮೋದಿ, ಅಮಿತ್‌ ಶಾ ಅವರನ್ನು ಖುದ್ದು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ.ಅಸಲಿಗೆ ಮೋದಿ ಅವರು ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಮದುವೆಗೆ ಮುಂಚೆಯೇ ಪತ್ರ ಮುಖೇನ ಶುಭಾಶಯ ತಿಳಿಸಿದ್ದರು. ವಿಜಯ್ ಅವರ ತಂದೆ ಬರೆದಿದ್ದ ಆಹ್ವಾನ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಮೋದಿ ಅವರು ಪತ್ರ ಬರೆದು ವಧು-ವರರಿಗೆ ಶುಭ ಕೋರಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಆಗಿರುವ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರು ಮಾರ್ಚ್ 04 ರಂದು ಹೈದರಾಬಾದ್​​ನಲ್ಲಿ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !