April 15, 2026
Wednesday, April 15, 2026
spot_img

ಕ್ಯಾನ್ಸರ್‌ ಪೀಡಿತ ಗಂಡನನ್ನು ಬದುಕಿಸಲು ಕೆಲಸ ಮಾಡ್ತಿದ್ದ ಮನೆಯಲ್ಲೇ ಕದ್ದು ಸಿಕ್ಕಿಬಿದ್ದ ಮಹಿಳೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ಯಾನ್ಸರ್‌ ಪೀಡಿತ ಪತಿಗೆ ಚಿಕಿತ್ಸೆ ಕೊಡಿಸಲು ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನ ಮಾಡಿ ಮಹಿಳೆಯೊಬ್ಬರು ಸಿಕ್ಕಿಬಿದ್ದಿದ್ದಾರೆ.

ಬೆಂಗಳೂರಿನ ಭೀಮಾನಗರದ ಚೈತ್ರಾ ಒಂದೊಂದು ಬಾರಿ ಒಂದೊಂದರಂತೆ ಬೆಳ್ಳಿಯ ಪಾತ್ರೆಗಳನ್ನು ಕದ್ದಿದ್ದಳು. ಒಟ್ಟಾರೆ 12.5 ಕೆಜಿ ಬೆಳ್ಳಿ ದೋಚಿದ್ದಳು. ಈಕೆಯ ಗಂಡ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನೆಲೆ ಖರ್ಚಿಗೆ ಹೆಚ್ಚಿನ ಹಣದ ಅವಶ್ಯಕತೆ ಇತ್ತು. ಹೀಗಾಗಿ ಕಳೆದ ಒಂದೂವರೆ ವರ್ಷದಿಂದ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲಿ ಈಕೆ ಕಳ್ಳತನಕ್ಕೆ ಇಳಿದಿದ್ದಳು ಎನ್ನಲಾಗಿದೆ.

ಮಹಡಿ ಮೇಲೆ ಇಟ್ಟಿದ್ದ ಬೆಳ್ಳಿ ಪಾತ್ರೆಗಳನ್ನು ಹಬ್ಬಗಳಿಗೆ ಮಾತ್ರ ಕುಟುಂಬದವರು ಬಳಸುತ್ತಿದ್ದರು. ಹೀಗಾಗಿ ಅದರ ಬಗ್ಗೆ ಫ್ಯಾಮಿಲಿ ಗಮನಹರಿಸಿಲ್ಲ. ಬೆಳ್ಳಿಯ ಪಾತ್ರೆಗಳನ್ನು ಕದ್ದು ಕೆಲ ದಿನಗಳ ನಂತರ ಕೆಲಸ ಬಿಟ್ಟಿದ್ದಾಳೆ. ಕುಟುಂಬದವರು ಬೆಳ್ಳಿ ಪಾತ್ರೆಗಳಿದ್ದ ಚೀಲ ಖಾಲಿಯಾಗಿದ್ದನ್ನು ನೋಡಿ ಶಾಕ್‌ ಆಗಿದ್ದಾರೆ.

ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಚೈತ್ರಾಳ ವಿಚಾರಣೆ ವೇಳೆ ಬೆಳ್ಳಿ ಸಾಮಗ್ರಿ ಕಳ್ಳತನ ಮಾಡಿರುವ ಸತ್ಯ ಬಯಲಾಗಿದ್ದು, ಬಂಧಿತಳಿಂದ 35 ಲಕ್ಷ ಮೌಲ್ಯದ 12.5 ಕೆಜಿ ಬೆಳ್ಳಿ, 7.5 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !