February 28, 2026
Saturday, February 28, 2026
spot_img

FOOD | ರಿಚ್ & ರಾಯಲ್ ರುಚಿ ಕೊಡುವ ಶಾಹಿ ಪನ್ನೀರ್ ಬಿರಿಯಾನಿ: ರೆಸಿಪಿ ಇಲ್ಲಿದೆ

ನೀವು ಡಯೆಟ್ ಮಾಡ್ತಿದ್ರೂ, ವಾರಾಂತ್ಯದಲ್ಲಿ ಸ್ವಲ್ಪ ರಿಚ್ ಮತ್ತು ರಾಯಲ್ ರುಚಿ ಬೇಕೆಂದರೆ ಶಾಹಿ ಪನ್ನೀರ್ ಬಿರಿಯಾನಿ ಸೂಪರ್ ಆಯ್ಕೆ. ಮನೆಯಲ್ಲೇ ಸುಲಭವಾಗಿ ಮಾಡಬಹುದಾದ ವಿಧಾನ ಇಲ್ಲಿದೆ.

ಬೇಕಾಗುವ ಪದಾರ್ಥಗಳು

ಬಾಸ್ಮತಿ ಅಕ್ಕಿ – 1 ಕಪ್
ಪನ್ನೀರ್ – 200 ಗ್ರಾಂ
ಈರುಳ್ಳಿ – 2 (ಸ್ಲೈಸ್)
ಟೊಮ್ಯಾಟೊ – 1
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀ ಸ್ಪೂನ್
ಮೊಸರು – ½ ಕಪ್
ಕಾಜು ಪೇಸ್ಟ್ – 2 ಟೇಬಲ್ ಸ್ಪೂನ್
ಬಿರಿಯಾನಿ ಮಸಾಲಾ – 1 ಟೀ ಸ್ಪೂನ್
ಅರಿಶಿಣ, ಮೆಣಸಿನಪುಡಿ – ತಲಾ ½ ಟೀ ಸ್ಪೂನ್
ತುಪ್ಪ/ಎಣ್ಣೆ – 2 ಟೇಬಲ್ ಸ್ಪೂನ್
ದಾಲ್ಚಿನ್ನಿ, ಲವಂಗ, ಏಲಕ್ಕಿ – ಸ್ವಲ್ಪ
ಪುದೀನಾ, ಕೊತ್ತಂಬರಿ ಸೊಪ್ಪು
ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ

ಅಕ್ಕಿಯನ್ನು ತೊಳೆದು 20 ನಿಮಿಷ ನೆನೆಸಿಟ್ಟು 70% ಬೇಯಿಸಿ ಬದಿಗಿಡಿ.

ಪ್ಯಾನ್‌ನಲ್ಲಿ ತುಪ್ಪ ಹಾಕಿ ದಾಲ್ಚಿನ್ನಿ, ಲವಂಗ, ಏಲಕ್ಕಿ ತಾಳಿಸಿ. ಈರುಳ್ಳಿ ಬಂಗಾರ ಬಣ್ಣ ಬರುವವರೆಗೆ ಹುರಿಯಿರಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮ್ಯಾಟೊ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಮೊಸರು, ಕಾಜು ಪೇಸ್ಟ್, ಮಸಾಲಾ ಪುಡಿ ಸೇರಿಸಿ ಮಿಶ್ರಣ ಮಾಡಿ.

ಪನ್ನೀರ್ ತುಂಡುಗಳನ್ನು ಹಾಕಿ 3–4 ನಿಮಿಷ ಸಿಮ್‌ನಲ್ಲಿ ಬೇಯಿಸಿ.

ಪಾತ್ರೆಯಲ್ಲಿ ಅಕ್ಕಿ ಮತ್ತು ಪನ್ನೀರ್ ಮಸಾಲಾವನ್ನು ಲೇಯರ್ ಮಾಡಿ, ಮೇಲಿಂದ ಪುದೀನಾ-ಕೊತ್ತಂಬರಿ ಹಾಕಿ. 10 ನಿಮಿಷ ದಮ್‌ನಲ್ಲಿ ಇಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !