February 28, 2026
Saturday, February 28, 2026
spot_img

CINE | ‘ಸ್ಪಿರಿಟ್’ ಚಿತ್ರದಿಂದ ಹೊರನಡೆದರಾ ಪ್ರಕಾಶ್ ರೈ? ವೈರಲ್ ಪೋಸ್ಟರ್ ನೀಡಿದ ಸುಳಿವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡ ಮೂಲದ ಬಹುಮುಖ ಪ್ರತಿಭೆ ಪ್ರಕಾಶ್ ರೈ ಸದ್ಯ ದಕ್ಷಿಣ ಭಾರತದ ಮೋಸ್ಟ್ ಬ್ಯುಸಿ ನಟ. ಪೋಷಕ ಪಾತ್ರವಿರಲಿ ಅಥವಾ ಪವರ್‌ಫುಲ್ ವಿಲನ್ ಇರಲಿ, ಪ್ರಕಾಶ್ ರೈ ಇದ್ದರೆ ಆ ಸಿನಿಮಾಗೆ ಒಂದು ತೂಕ ಇರುತ್ತದೆ. ಆದರೆ, ಈಗ ಕೇಳಿಬರುತ್ತಿರುವ ಸುದ್ದಿಯೆಂದರೆ, ಪ್ರಭಾಸ್ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ‘ಸ್ಪಿರಿಟ್’ನಿಂದ ಪ್ರಕಾಶ್ ರೈ ಹೊರಬಂದಿದ್ದಾರೆ!

ಕೆಲವು ವಾರಗಳ ಹಿಂದೆ ಪ್ರಕಾಶ್ ರೈ ಅವರು ಈ ಚಿತ್ರದಿಂದ ಹೊರಬಂದಿದ್ದಾರೆಂಬ ವದಂತಿ ಹಬ್ಬಿದಾಗ, ಖುದ್ದು ರೈ ಅವರೇ ಟ್ವೀಟ್ ಮಾಡಿ “ಸುಳ್ಳು ಸುದ್ದಿ ಹಬ್ಬಿಸಬೇಡಿ, ಶೂಟಿಂಗ್ ಇನ್ನೂ ಆರಂಭವಾಗಿಲ್ಲ” ಎಂದು ಸ್ಪಷ್ಟನೆ ನೀಡಿದ್ದರು. ಆದರೆ ಇತ್ತೀಚೆಗೆ ‘ಸ್ಪಿರಿಟ್’ ತಂಡ ಬಿಡುಗಡೆ ಮಾಡಿರುವ ಹೊಸ ಪೋಸ್ಟರ್ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಈ ಪೋಸ್ಟರ್‌ನಲ್ಲಿ ಚಿತ್ರದ ತಾಂತ್ರಿಕ ವರ್ಗ ಮತ್ತು ಪ್ರಮುಖ ನಟರ ಇನ್‌ಸ್ಟಾಗ್ರಾಂ ಹ್ಯಾಂಡಲ್‌ಗಳನ್ನು ಉಲ್ಲೇಖಿಸಲಾಗಿದೆ, ಆದರೆ ಅದರಲ್ಲಿ ಪ್ರಕಾಶ್ ರೈ ಹೆಸರನ್ನೇ ಕೈಬಿಡಲಾಗಿದೆ.

ಸಿನಿಮಾ ಮೂಲಗಳ ಪ್ರಕಾರ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಮತ್ತು ಪ್ರಕಾಶ್ ರೈ ನಡುವೆ ಸೃಜನಾತ್ಮಕ ಭಿನ್ನಾಭಿಪ್ರಾಯ ಉಂಟಾಗಿದೆ ಎನ್ನಲಾಗಿದೆ.

ತಮಗೆ ನೀಡಲಾಗಿದ್ದ ಕೆಲವು ದೃಶ್ಯಗಳ ಬಗ್ಗೆ ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಸಂದೀಪ್ ವಂಗಾ ತಮ್ಮ ದೃಷ್ಟಿಕೋನಕ್ಕೆ ಅಂಟಿಕೊಳ್ಳುವ ನಿರ್ದೇಶಕರು. ಹೀಗಾಗಿ ಇಬ್ಬರ ನಡುವೆ ಸಮನ್ವಯದ ಕೊರತೆ ಉಂಟಾಗಿ, ಪ್ರಕಾಶ್ ರೈ ಈ ಪ್ರಾಜೆಕ್ಟ್‌ನಿಂದ ಹೊರನಡೆಯಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !