ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಸ್ ಮಹಾರಾಜ ರವಿತೇಜ ಅವರ ಹೊಸ ಸಿನಿಮಾ ‘ಇರುಮುಡಿ’ ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸ್ತಿದೆ. ಮೂರನೇ ಶನಿವಾರ ಬಂದರೂ ಚಿತ್ರಮಂದಿರಗಳ ಮುಂದೆ ಜನ ಕಮ್ಮಿ ಆಗೆ ಇಲ್ಲ. ಮೂರನೇ ಶನಿವಾರ ಒಂದೇ ದಿನ ಈ ಸಿನಿಮಾ ಬರೋಬ್ಬರಿ 5.75 ಕೋಟಿ ರೂಪಾಯಿ ಬಾಚಿಕೊಂಡಿದೆ.
ಶುಕ್ರವಾರಕ್ಕೆ ಹೋಲಿಸಿದರೆ ಕಲೆಕ್ಷನ್‌ನಲ್ಲಿ ಬರಿ 10 ಶೇಕಡ ಮಾತ್ರ ಡ್ರಾಪ್ ಆಗಿದೆ ಅಷ್ಟೇ. ಅಂದ್ರೆ ವೀಕೆಂಡ್‌ನಲ್ಲಿ ಜನ ಥಿಯೇಟರ್‌ಗೆ ಮುಗಿಬಿದ್ದು ಬರ್ತಿದ್ದಾರೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ? ಈ ಕಲೆಕ್ಷನ್‌ನಲ್ಲಿ ಸಿಂಹಪಾಲ ನೆರೆ ರಾಜ್ಯಗಳಾದ ಆಂಧ್ರ ಮತ್ತು ತೆಲಂಗಾಣದಿಂದಲೇ ಬಂದಿರೋದು ವಿಶೇಷ.
ಈಗಿನ ಲೆಕ್ಕಾಚಾರದ ಪ್ರಕಾರ, ‘ಇರುಮುಡಿ’ ಭಾರತದಾದ್ಯಂತ ಒಟ್ಟು 187.25 ಕೋಟಿ ರೂಪಾಯಿ ಗ್ರೋಸ್ ಕಲೆಕ್ಷನ್ ಮಾಡಿದೆ. ಇದರಲ್ಲಿ ಬರೀ ತೆಲುಗು ರಾಜ್ಯಗಳಿಂದಲೇ ಬರೋಬ್ಬರಿ 169 ಕೋಟಿ ರೂಪಾಯಿ ಹರಿದುಬಂದಿದೆ. ಈ ಸಂಡೇ ಮುಗಿಯೋದರೊಳಗೆ ಸಿನಿಮಾ ಒಟ್ಟು ಕಲೆಕ್ಷನ್ 193 ರಿಂದ 194 ಕೋಟಿ ರೂಪಾಯಿ ತಲುಪೋದು ಗ್ಯಾರಂಟಿ. ಇನ್ನೇನು ಮುಂದಿನ ವಾರದ ದಿನಗಳಲ್ಲಿ ಸುಲಭವಾಗಿ 200 ಕೋಟಿ ಕ್ಲಬ್ ಸೇರೋದು ಪಕ್ಕಾ ಆಗಿದೆ.
ಅಂದಹಾಗೆ, ತೆಲುಗು ಚಿತ್ರರಂಗದ ಇತಿಹಾಸದಲ್ಲೇ ಇದುವರೆಗೂ ಬರಿ 7 ಸಿನಿಮಾಗಳು ಮಾತ್ರ 200 ಕೋಟಿಯ ಗಡಿ ದಾಟಿವೆ. ಆದರೆ ಇಲ್ಲೊಂದು ದೊಡ್ಡ ಟ್ವಿಸ್ಟ್ ಇದೆ. ಆ 7 ಸಿನಿಮಾಗಳಲ್ಲಿ ‘ಬಾಹುಬಲಿ 2’ ಬಿಟ್ಟು ಮಿಕ್ಕಿದ್ದೆಲ್ಲಾ ಟಿಕೆಟ್ ರೇಟ್ ಜಾಸ್ತಿ ಮಾಡಿ ಆ ಮೈಲಿಗಲ್ಲು ತಲುಪಿದ್ದವು. ಆದರೆ ರವಿತೇಜ ಅವರ ‘ಇರುಮುಡಿ’ ಸಿನಿಮಾ ಯಾವುದೇ ಟಿಕೆಟ್ ರೇಟ್ ಏರಿಸದೇ, ನಾರ್ಮಲ್ ಬೆಲೆಯಲ್ಲೇ ಈ ಸಾಧನೆ ಮಾಡುತ್ತಿದೆ. ಒಟ್ಟಿನಲ್ಲಿ ಮಾಸ್ ಮಹಾರಾಜ ತನ್ನ ಪವರ್ ಏನೆಂದು ಬಾಕ್ಸ್ ಆಫೀಸ್‌ನಲ್ಲಿ ತೋರಿಸಿಕೊಟ್ಟಿದ್ದಾರೆ.



