February 28, 2026
Saturday, February 28, 2026
spot_img

Trust The Process | ಬದುಕು ನಿಮ್ಮ ಕೈ ತಪ್ಪುತ್ತಿದೆಯೇ? ಭಯ ಬೇಡ, ಇದು ಹೊಸ ಪರ್ವದ ಆರಂಭ!

ನಮ್ಮ ಜೀವನದಲ್ಲಿ ಕೆಲವೊಮ್ಮೆ ಎಲ್ಲವೂ ಅಸ್ತವ್ಯಸ್ತವಾಗುತ್ತಿದೆ, ಅಂದುಕೊಂಡಿದ್ದು ಯಾವುದೂ ನಡೆಯುತ್ತಿಲ್ಲ ಎಂಬ ಆತಂಕ ಕಾಡುವುದು ಸಹಜ. ನಾವು ಹಿಡಿಯಲು ಹೊರಟ ಅವಕಾಶಗಳು ಮರಳಿನಂತೆ ಕೈಜಾರಿದಾಗ “ಮುಂದೇನು?” ಎಂಬ ಪ್ರಶ್ನೆ ಭೂತದಂತೆ ಕಾಡುತ್ತದೆ. ಆದರೆ ನೆನಪಿಡಿ, ಹಳೆಯ ಎಲೆಗಳು ಉದುರಿದಾಗಲೇ ಹೊಸ ಚಿಗುರು ಬರಲು ಸಾಧ್ಯ.

ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಒಂದು ಅರ್ಥವಿರುತ್ತದೆ. ಇಂದು ನಮಗೆ ಹಿನ್ನಡೆಯಾಗಿ ಕಂಡದ್ದು, ನಾಳೆಯ ದೊಡ್ಡ ಯಶಸ್ಸಿಗೆ ಅಡಿಪಾಯವಾಗಬಹುದು. ಸೋಲಿನ ಭಯವನ್ನು ಬದಿಗಿಟ್ಟು, “ನಡೆಯುವುದೆಲ್ಲವೂ ಒಳ್ಳೆಯದಕ್ಕೇ” ಎಂಬ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಿ. ಕತ್ತಲೆಯ ನಂತರ ಬೆಳಕು ಬಂದೇ ಬರುತ್ತದೆ, ನಿಮ್ಮ ತಾಳ್ಮೆ ಮತ್ತು ಪ್ರಯತ್ನಕ್ಕೆ ಖಂಡಿತವಾಗಿಯೂ ಪ್ರತಿಫಲ ಸಿಗಲಿದೆ.

ಜೀವನದಲ್ಲಿ ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ, ಆದರೆ ನಮ್ಮ ಮನಸ್ಥಿತಿಯನ್ನು ನಿಯಂತ್ರಿಸುವ ಶಕ್ತಿ ನಮಗಿದೆ. ಧೈರ್ಯವಾಗಿ ಹೆಜ್ಜೆ ಹಾಕಿ, ಕಾಲವೇ ಎಲ್ಲವನ್ನೂ ಸರಿಪಡಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !