October 18, 2026
Sunday, October 18, 2026
spot_img

ಇರಾನ್ ಶಾಲೆ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ: 40 ವಿದ್ಯಾರ್ಥಿಗಳು ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೆಚ್ಚಾಗಿದ್ದು, ಅಮೆರಿಕದೊಂದಿಗೆ ಸೇರಿ ಇರಾನ್‌ ಮೇಲೆ ದಾಳಿ ನಡೆಸಿದೆ.

ಇರಾನ್ ನಾಯಕ ಕಮಿನೇನಿ ನಿವಾಸ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿದೆ. ನಿವಾಸ ಪಕ್ಕದಲ್ಲೇ ಸ್ಫೋಟಗಳು, ಮಿಸೈಲ್ ದಾಳಿ ನಡೆದಿದೆ.

ಈ ಪೈಕಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್‌ನ ಪ್ರಾಥಮಿಕ ಶಾಲೆಯೊಂದು ಧ್ವಂಸಗೊಂಡಿದೆ. ಈ ದಾಳಿಯಲ್ಲಿ 40 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ ತಿಳಿಸಿದೆ.

ಇರಾನ್‌ನಲ್ಲಿ ಕಳೆದೆರಡು ದಿನಗಳಿಂದ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಇದೇ ವೇಳೆ ದಾಳಿ ಸಂಭವ ಹೆಚ್ಚಿರುವ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು.ಈ ಪೈಕಿ ಶಾಲಾ ಮಕ್ಕಳಿರುವಾಗಲೇ ಇಸ್ರೇಲ್ ಮಿಸೈಲ್ ದಾಳಿಯಾಗಿದೆ.

Must Read