April 15, 2026
Wednesday, April 15, 2026
spot_img

FOOD | ಸ್ವಲ್ಪ ಕಹಿ, ಸ್ವಲ್ಪ ಖಾರ ಈ ಮೆಂತ್ಯೆ ಪಲಾವ್: ಆರೋಗ್ಯಕ್ಕೆ ಮಾತ್ರ ಭಾರೀ ಒಳ್ಳೆದು

ಮೆಂತ್ಯೆ ಸೊಪ್ಪಿನ ಸ್ವಲ್ಪ ಕಹಿ ಮಸಾಲೆಗಳ ಖಾರ ಸೇರಿದಾಗ ಯಮ್ಮಿ ಮೆಂತ್ಯೆ ಪಲಾವ್ ರೆಡಿ ಆಗುತ್ತೆ. ಇದು ರುಚಿಕರವಾಗಿರುವುದಷ್ಟೇ ಅಲ್ಲ, ಆರೋಗ್ಯಕರವೂ ಆಗಿದೆ. ಮೆಂತ್ಯೆ ಸೊಪ್ಪಿನಲ್ಲಿ ಲೋಹಾಂಶ, ನಾರಿನಾಂಶ ಮತ್ತು ವಿವಿಧ ಪೌಷ್ಟಿಕಾಂಶಗಳು ಸಮೃದ್ಧವಾಗಿವೆ. ಆದ್ದರಿಂದ ಇದು ದೇಹದ ಆರೋಗ್ಯ ಕಾಪಾಡಲು ಸಹಕಾರಿ.

ಬೇಕಾಗುವ ಪದಾರ್ಥಗಳು

ಅಕ್ಕಿ – 1 ಕಪ್
ತಾಜಾ ಮೆಂತ್ಯೆ ಸೊಪ್ಪು – 1 ಕಪ್
ಈರುಳ್ಳಿ – 1
ಹಸಿಮೆಣಸು – 2
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಲವಂಗ – 3
ಏಲಕ್ಕಿ – 2
ದಾಲ್ಚಿನ್ನಿ – 1 ಸಣ್ಣ ತುಂಡು
ಅರಿಶಿನ – ಚಿಟಿಕೆ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ ಅಥವಾ ಎಣ್ಣೆ – 2 ಚಮಚ
ನೀರು – 2 ಕಪ್

ಮಾಡುವ ವಿಧಾನ

ಮೊದಲು ಅಕ್ಕಿಯನ್ನು ತೊಳೆಯಿಸಿ 20 ನಿಮಿಷ ನೆನೆಸಿಡಿ. ಕುಕ್ಕರ್ ಅಥವಾ ದಪ್ಪ ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಲವಂಗ, ಏಲಕ್ಕಿ, ದಾಲ್ಚಿನ್ನಿ ಹಾಕಿ ವಾಸನೆ ಬರುವವರೆಗೆ ಹುರಿಯಿರಿ. ಬಳಿಕ ಈರುಳ್ಳಿ ಹಾಗೂ ಹಸಿಮೆಣಸು ಸೇರಿಸಿ ಬಂಗಾರದ ಬಣ್ಣ ಬರುವವರೆಗೆ ಕರಿಯಿರಿ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಸ್ವಲ್ಪ ಹೊತ್ತು ಹುರಿದ ನಂತರ ಕತ್ತರಿಸಿದ ಮೆಂತ್ಯೆ ಸೊಪ್ಪು ಹಾಕಿ ಮೃದುವಾಗುವವರೆಗೆ ಬೇಯಿಸಿ. ಅರಿಶಿನ ಮತ್ತು ಉಪ್ಪು ಸೇರಿಸಿ ಕಲಸಿ.

ನೆನೆಸಿದ ಅಕ್ಕಿ ಸೇರಿಸಿ ನಿಧಾನವಾಗಿ ಕಲಸಿ. ಈಗ ನೀರು ಹಾಕಿ ಮುಚ್ಚಳ ಮುಚ್ಚಿ ಮಧ್ಯಮ ಉರಿಯಲ್ಲಿ 2 ಸೀಟಿ ಬರುವವರೆಗೆ ಬೇಯಿಸಿ.

ಒತ್ತಡ ಇಳಿದ ನಂತರ ಮೆಂತ್ಯೆ ಪಲಾವ್ ಅನ್ನು ನಿಧಾನವಾಗಿ ಕಲಸಿ. ಮೊಸರು ಜೊತೆ ಸವಿಯಿರಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !