April 18, 2026
Saturday, April 18, 2026
spot_img

ಇರಾನ್ ಸುಪ್ರೀಂ ಲೀಡರ್ ಭಾವಚಿತ್ರಕ್ಕೆ ಬೆಂಕಿ: ಯುವತಿಯ ವಿಭಿನ್ನ ಪ್ರತಿರೋಧದ ವಿಡಿಯೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಇರಾನ್‌ನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ಅದೇ ಜ್ವಾಲೆಯಲ್ಲಿ ಯುವತಿಯೊಬ್ಬಳು ಸಿಗರೇಟ್ ಹಚ್ಚಿಕೊಳ್ಳುತ್ತಿರುವ ವಿಡಿಯೋವೊಂದು ಈಗ ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದೆ.

ಇಸ್ರೇಲ್ ಮತ್ತು ಅಮೆರಿಕದ ವೈಮಾನಿಕ ದಾಳಿಯಲ್ಲಿ ಖಮೇನಿ ಹತರಾಗಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಕೆನಡಾದಲ್ಲಿ ನಡೆದ ಇರಾನ್ ಆಡಳಿತ ವಿರೋಧಿ ಬೃಹತ್ ರ್ಯಾಲಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಭಾವಚಿತ್ರ ಉರಿಯುತ್ತಿರುವಾಗ ಯುವತಿ ಸಿಗರೇಟ್ ಹಚ್ಚಿಕೊಳ್ಳುವ ದೃಶ್ಯ ಆಡಳಿತ ವಿರೋಧಿಗಳ ಗಮನ ಸೆಳೆದಿದೆ.

ಇರಾನ್ ಸರ್ಕಾರದ ಕಟ್ಟುನಿಟ್ಟಿನ ನಿಯಮಗಳು ಮತ್ತು ಇತ್ತೀಚಿನ ಯುದ್ಧದ ಪರಿಸ್ಥಿತಿಯ ವಿರುದ್ಧ ವಿದೇಶಗಳಲ್ಲಿ ನೆಲೆಸಿರುವ ಇರಾನಿಗರು ಈ ಮೂಲಕ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !