ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್-ಇಸ್ರೇಲ್-ಅಮೆರಿಕ ಯುದ್ಧದಿಂದಾಗಿ ಮಧ್ಯ ಪ್ರಾಚ್ಯ ದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಭಾರತ ಸರಕಾರ ಸಹಾಯವಾಣಿ ಪ್ರಕಟಿಸಲಾಗಿದೆ. ಇದೀಗ ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಕೂಡ ಜಿಲ್ಲೆಯ ನಾಗರಿಕರ ರಕ್ಷಣೆಗೆ ಸಹಾಯವಾಣಿ ತೆರೆದಿದ್ದಾರೆ.
ಯುದ್ಧದ ವಾತಾವರಣ ಹಿನ್ನೆಲೆ ಎಲ್ಲೆಡೆ ವಿಮಾನ ಹಾರಾಟ ರದ್ದು ಮಾಡಲಾಗಿದೆ. ದುಬೈ ಸೇರಿದಂತೆ ಹಲವೆಡೆ ಕನ್ನಡಿಗರು ಸೇರಿದಂತೆ ಭಾರತೀಯರು ಸಿಲುಕಿಕೊಂಡಿದ್ದಾರೆ. ಹಾಗಾಗಿ ಹೊರದೇಶಗಳಲ್ಲಿ ಸಿಲುಕಿರುವವರ ರಕ್ಷಣೆಗೆ ಕೋಲಾರ ಜಿಲ್ಲಾಡಳಿತ ಸಹಾಯವಾಣಿ ಆರಂಭಿಸಿದೆ.
ಸಹಾಯವಾಣಿ
ಕತಾರ್ 00974-55647502, ಬಹ್ರೇನ್ 00973-39418071, ಜೋರ್ಡಾನ್ ಸಹಾಯವಾಣಿ ನಂಬರ್ 00962-770 422 276,ಕುವೈತ್ +965 65501946,
ಇರಾಕ್ +964 7716511185, ಪ್ಯಾಲೆಸ್ಟೈನ್ ಸಹಾಯವಾಣಿ ನಂಬರ್ +970 592916418
ಇನ್ನು ಕೋಲಾರ ಜಿಲ್ಲೆಯಲ್ಲೂ ವಿಪತ್ತು ನಿರ್ವಹಣಾ ಕೇಂದ್ರ ಆರಂಭಿಸಲಾಗಿದ್ದು, 9740050061 ಅಥವಾ 9606241449 ನಂಬರ್ಗೆ ಕರೆ ಮಾಡಬಹುದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾಹಿತಿ ನೀಡಿದ್ದಾರೆ.



