ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಇರಾನ್ ಮೇಲಿನ ಅಮೆರಿಕ, ಇಸ್ರೇಲ್ ದಾಳಿಯನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತೀವ್ರವಾಗಿ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಅವರು, ಯುದ್ಧದ ಮುಂದುವರಿದ ಭಾಗವಾಗಿ ಇರಾನ್ ಗಲ್ಫ್ ರಾಷ್ಟ್ರಗಳಲ್ಲಿ ಇರುವ ಅಮೆರಿಕ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸುತ್ತಿದೆ. ಇದರಿಂದ ಗಲ್ಫ್ ರಾಷ್ಟ್ರಗಲ್ಲಿಯೂ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ಮಲಯಾಳಿಗಳು ವಾಸಿಸುತ್ತಿದ್ದಾರೆ. ಹೀಗಾಗಿ ಅಗತ್ಯವಿದ್ದರೆ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಮನೆಗೆ ಕರೆತರಲು ಕೇಂದ್ರವು ಸನ್ನದ್ಧವಾಗಬೇಕು ಎಂದಿದ್ದಾರೆ.
ಕೇರಳ ಸರ್ಕಾರಿ ಸಂಸ್ಥೆ ನೋರ್ಕಾ ರೂಟ್ಸ್ ಈಗಾಗಲೇ ಅನಿವಾಸಿ ಭಾರತೀಯರಿಗಾಗಿ ನಿಯಂತ್ರಣ ಕೊಠಡಿಯನ್ನು ತೆರೆದಿದೆ.
ಅಂದಾಜಿನ ಪ್ರಕಾರ ಸುಮಾರು ಮೂರು ಮಿಲಿಯನ್ ಮಲಯಾಳಿಗಳು ಗಲ್ಫ್ ರಾಷ್ಟ್ರಗಳಲ್ಲಿದ್ದಾರೆ. ಇದೀಗ ಇವರೆಲ್ಲರ ಅಉರಕ್ಷತೆಯ ಚಿಂತೆ ಕಾಡುತ್ತಿದೆ. ಖಮೇನಿ ಮತ್ತು ಅವರ ಕುಟುಂಬ ಸದಸ್ಯರನ್ನು ಕೊಂದು ಅಮೆರಿಕ ಮತ್ತು ಇಸ್ರೇಲ್ ಆ ರಾಷ್ಟ್ರದ ವಿರುದ್ಧ ಮಾಡುತ್ತಿರುವುದು ಗೂಂಡಾಗಿರಿ ಮತ್ತು ಹುಚ್ಚುತನ. ತಮ್ಮ ಹಿತಾಸಕ್ತಿಗಳಿಗೆ ಮಣಿಯುವ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಸಾಮ್ರಾಜ್ಯಶಾಹಿ ಈ ಗೂಂಡಾಗಿರಿಯನ್ನು ಮುನ್ನಡೆಸುತ್ತಿದೆ. ಇದರ ವಿರುದ್ಧ ನಾವು ನಮ್ಮ ಬಲವಾದ ಅಸಮಾಧಾನವನ್ನು ವ್ಯಕ್ತಪಡಿಸಬೇಕು ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.



