June 30, 2026
Tuesday, June 30, 2026
spot_img

ಜೀವನದಲ್ಲಿ ತಕ್ಕಮಟ್ಟಿಗೆ ಯಶಸ್ಸು ಕಂಡಿರುವ ಜನರು ಬೆಳಗ್ಗೆ ಈ ಮೂರು ಕೆಲಸಗಳನ್ನು ಮಾಡಿಯೇ ಮಾಡ್ತಾರೆ!

ಜೀವನದಲ್ಲಿ ಯಶಸ್ಸು ಕಂಡಿರುವ ಎಷ್ಟೋ ಮಂದಿ ಬೆಳಗ್ಗೆ ಎದ್ದ ನಂತರ ಈ ಮೂರು ಕೆಲಸಗಳನ್ನು ಮಾಡ್ತಾರಂತೆ. ಇದು ಅವರನ್ನು ಎಲ್ಲರಿಗಿಂತ ಭಿನ್ನವಾಗಿ ಮಾಡುತ್ತದೆ. ಮಾಮೂಲಿಯಂತೆ ಎದ್ದು ಬಾತ್‌ರೂಮ್‌ನಲ್ಲಿ ಮುಕ್ಕಾಲು ಗಂಟೆ ಫೋನ್‌ ನೋಡೋದು, ಏನೂ ಕೆಲಸವೂ ಮಾಡದೇ ಸುಮ್ಮನೆ ಕುಳಿತಿರೋದು ಇದೆಲ್ಲ ಮಾಮೂಲಿ ಜನರು ಮಾಡುವ ಕೆಲಸವಾಗಿದೆ. ಆದರೆ ಸಕ್ಸಸ್‌ಫುಲ್‌ ಜನ ಏನೆಲ್ಲಾ ಮಾಡ್ತಾರೆ ನೋಡಿ..

ಈ ಜನರು ಜಗತ್ತಿನಲ್ಲಿ ಏನಾಗ್ತಿದೆ ಅನ್ನೋದ್ರ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ಬೆಳಗ್ಗೆ ಎದ್ದ ನಂತರ ಫೋನ್‌ ಮುಟ್ಟೋದಿಲ್ಲ. ಎದ್ದ ಒಂದು ಅಥವಾ ಎರಡು ಗಂಟೆಗಳವರೆಗೂ ಇವರು ಫೋನ್‌ ನೋಡೋದಿಲ್ಲ. ಅವರಿವರ ಲೈಫ್‌ ಬಗ್ಗೆ ನೋಡೋದು, ಏನೋ ಡಿಸಪಾಯಿಂಟಿಂಗ್‌ ನ್ಯೂಸ್‌ ಇದ್ದರೆ ದಿನ ಹಾಳು ಮಾಡಿಕೊಳ್ಳೋ ಅಭ್ಯಾಸ ಇವರಿಗಿಲ್ಲ.

ದಿನ ಎದ್ದ ತಕ್ಷಣ ಹದಿನೈದು ನಿಮಿಷವನ್ನು ಸೈಲೆನ್ಸ್‌ನಲ್ಲಿ ಕಳೆಯುತ್ತಾರೆ. ಮನೆಯಲ್ಲಿ ಎಲ್ಲರೂ ಏಳುವ ಮುನ್ನವೇ ಎದ್ದು ನಿಶ್ಯಬ್ದವನ್ನು ಎಂಜಾಯ್‌ ಮಾಡ್ತಾರೆ. ಮೆಡಿಟೇಷನ್‌ ಮಾಡಿ, ಈ ಜೀವನಕ್ಕೆ ನಾನ್ಯಾಕೆ ಋಣಿಯಾಗಿದ್ದೇನೆ ಎಂದು ಗ್ರಾಟಿಟ್ಯೂಡ್‌ ಬರೆಯುತ್ತಾರೆ. ನರ್ವಸ್‌ ಸಿಸ್ಟಮ್‌ನ್ನು ಶಾಂತಗೊಳಿಸಿಕೊಂಡು ದಿನದ ಗಜಿಬಿಜಿಗೆ ತಯಾರಾಗುತ್ತಾರೆ.

ಬೆಳಗ್ಗೆ ಎದ್ದು ತಮ್ಮ ನಿತ್ಯದ ಅಭ್ಯಾಸಗಳನ್ನು ಮುಗಿಸಿದ ಮೇಲೆ ಇವರು ಪುಸ್ತಕವನ್ನು ಓದುತ್ತಾರೆ. ಜೀವನಕ್ಕೆ ಸ್ಪೂರ್ತಿಯನ್ನು ನೀಡುವ ಲೇಖನಗಳನ್ನು ಓದುತ್ತಾರೆ. ಕ್ರಿಯೇಟಿವ್‌ ಕೆಲಸಗಳನ್ನು ಮಾಡಿ ಮೈಂಡ್‌ ಶಾರ್ಪ್‌ ಮಾಡಿಕೊಳ್ತಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !