ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ರೋಸ್ಟನ್ ಚೇಸ್ , ಜೇಸನ್ ಹೋಲ್ಡರ್, ರೋವ್ಮನ್ ಪೊವೆಲ್ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, ಈ ಮೂಲಕ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 195 ರನ್ಗಳಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ್ದ ವೆಸ್ಟ್ ಇಂಡೀಸ್ ತಂಡ ನಿಧಾನಗತಿ ಆರಂಭ ಪಡೆದುಕೊಂಡಿತು. ಹೋಪ್ 33 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 32 ರನ್ಗಳಿಸಿ ನಿರ್ಗಮಿಸಿದರು. ನಂತರ ಬಂದ ಹೆಟ್ಮೇಯರ್ ಕೇವಲ 12 ಎಸೆತಗಳಲ್ಲಿ 27 ರನ್ಗಳಿಸಿ ಅಪಾಯಕಾರಿಯಾಗುತ್ತಿದ್ದರು. ಆದರೆ ಬುಮ್ರಾ ಬೌಲಿಂಗ್ನಲ್ಲಿ ಕೀಪರ್ ಸಂಜು ಸ್ಯಾಮ್ಸನ್ಗೆ ಕ್ಯಾಚ್ ನೀಡಿ ಔಟ್ ಆದರು. ಅದೇ ಓವರ್ನಲ್ಲಿ ಬುಮ್ರಾ 240 ರನ್ಗಳಿಸಿದ್ದ ರೋಸ್ಟನ್ ಚೇಸ್ ವಿಕೆಟ್ ಕೂಡ ಪಡೆದರು.
ಶೆರ್ಫಾನ್ ರುದರ್ಫೋಡ್ 9 ಎಸೆತಗಳಲ್ಲಿ ಕೇವಲ 11 ರನ್ಗಳಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ನೀಡಿದರು. ಆದರೆ ಕೊನೆಯ 6 ಓವರ್ಗಳಲ್ಲಿ ಅಬ್ಬರಿಸಿದ ರೋವ್ಮನ್ ಪೊವೆಲ್ ಹಾಗೂ ಹೋಲ್ಡರ್ ಕೇವಲ 35 ಎಸೆತಗಳಲ್ಲಿ 76 ರನ್ ಸೇರಿಸಿ ದಾಖಲೆಯ ಮೊತ್ತ ನೀಡಲು ನೆರವಾದರು.



