March 2, 2026
Monday, March 2, 2026
spot_img

82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್‌ ಬರ್ತ್‌ ಅಲಾರ್ಟ್‌ ಮಾಡಿದ ರೈಲ್ವೆ ವಿರುದ್ಧ ದೂರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವೃದ್ಧರು ರೈಲಿನಲ್ಲಿ ಓಡಾಡೋದು ಕಡಿಮೆ, ಅದರಲ್ಲೂ ಸ್ಲೀಪರ್‌ನಲ್ಲಿ ವೃದ್ಧರು ಕಾಣಿಸೋದು ಕಡಿಮೆಯೇ. ಆದರೆ ರೈಲೊಂದರಲ್ಲಿ 82 ವರ್ಷದ ವೃದ್ಧೆಗೆ ರೈಲಿನಲ್ಲಿ ಅಪ್ಪರ್‌ ಬರ್ತ್‌ ಅಲಾರ್ಟ್‌ ಮಾಡಲಾಗಿದೆ.

ವೃದ್ಧೆ ಮೇಲೆ ಹತ್ತೋದು ಹೇಗೆ? ವಯಸ್ಸು ಎಷ್ಟು ಎಂದು ಟಿಕೆಟ್‌ ಪಡೆಯುವ ಮುನ್ನ ಕಾಣಿಸುತ್ತದೆ. ಆದರೂ ಯಾಕೆ ಕೊಟ್ಟಿದ್ದಾರೆ ಎಂದು ರೈಲ್ವೆ ಇಲಾಖೆ ದೂರು ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿದ ರೈಲ್ವೆ, 45ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಲೋವರ್ ಬರ್ತ್​ ಹಂಚಿಕೆಗೆ ಸಂಬಂಧಿಸಿದ ನಿಯಮಗಳನ್ನು ಸ್ಪಷ್ಟಪಡಿಸಿದೆ. ಭಾರತೀಯ ರೈಲ್ವೆಯ ಸೀಟು ಕಾಯ್ದಿರಿಸುವಿಕೆ ವ್ಯವಸ್ಥೆಯಲ್ಲಿ, ಯಾವುದೇ ಆಯ್ಕೆ ನೀಡದಿದ್ದರೂ ಕೂಡ, ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳಾ ಪ್ರಯಾಣಿಕರಿಗೆ ಸ್ವಯಂ ಚಾಲಿತವಾಗಿ ಕೆಳ ಬರ್ತ್​ ಹಂಚಿಕೆ ಮಾಡುವ ಅವಕಾಶವಿದೆ.

ಇಂಟರ್ನೆಟ್​ ಮೂಲಕ ಕಾಯ್ದಿರಿಸಿದ ಟಿಕೆಟ್‌ಗಳನ್ನು ಬುಕ್ ಮಾಡುವ ಸಮಯದಲ್ಲಿ, ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಬುಕಿಂಗ್ ಅನ್ನು ಆಯ್ಕೆ ಮಾಡಲು ಅವಕಾಶವಿದೆ ಎಂದು ತಿಳಿಸಲಾಗಿದೆ. ಅಂತಹ ಸಂದರ್ಭದಲ್ಲಿ ಕೆಳ ಬರ್ತ್ ಲಭ್ಯವಿದ್ದರೆ ಮಾತ್ರ ಟಿಕೆಟ್ ಬುಕ್ ಮಾಡಲಾಗುತ್ತದೆ. ಇದಲ್ಲದೆ, ಭಾರತೀಯ ರೈಲ್ವೆಯಲ್ಲಿ, ಕಾಯ್ದಿರಿಸಿದ ಟಿಕೆಟ್​ಗಳನ್ನು ಮೊದಲು ಬಂದವರಿಗೆ ಮೊದಲು ಸೇವೆ ಆಧಾರದ ಮೇಲೆ ಬುಕ್ ಮಾಡಬಹುದು ಮತ್ತು ಆಯ್ಕೆಯ ಬರ್ತ್ ಲಭ್ಯತೆಗೆ ಒಳಪಟ್ಟಿರುತ್ತದೆ.

ನೀವು ಲೋವರ್ ಬರ್ತ್ ಬಯಸಿದರೆ, ಒಂದು ಪಿಎನ್‌ಆರ್‌ನಲ್ಲಿ ಕೇವಲ ಎರಡು ಟಿಕೆಟ್‌ಗಳನ್ನು ಬುಕ್ ಮಾಡಿ. ನೀವು ಮೂರು ಅಥವಾ ನಾಲ್ಕು ಟಿಕೆಟ್‌ಗಳನ್ನು ಒಟ್ಟಿಗೆ ಬುಕ್ ಮಾಡಿದಾಗ, ವ್ಯವಸ್ಥೆಯು ಅದನ್ನು ಗುಂಪು ಬುಕಿಂಗ್ ಎಂದು ಪರಿಗಣಿಸುತ್ತದೆ ಮತ್ತು ಲೋವರ್ ಬರ್ತ್ ಆದ್ಯತೆಯನ್ನು ತೆಗೆದುಹಾಕಲಾಗುತ್ತದೆ. ಅಂದರೆ ಕಡಿಮೆ ಟಿಕೆಟ್‌ಗಳು, ಹೆಚ್ಚು ಲಾಭ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !