September 27, 2026
Sunday, September 27, 2026
spot_img

ಸ್ನಾನದ ಕೋಣೆಯ ಮೇಲ್ಛಾವಣಿ ಕುಸಿದು ಬಿದ್ದಿದೆ, ಪ್ಲೀಸ್‌ ನಮ್ಮನ್ನು ಬೆಂಗಳೂರಿಗೆ ಕರೆಸಿಕೊಳ್ಳಿ ಎಂದ ಕುಟುಂಬ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇರಾನ್‌-ಇಸ್ರೇಲ್‌ ಯುದ್ಧದ ಪರಿಣಾಮವಾಗಿ ಕೊಲ್ಲಿ ರಾಷ್ಟ್ರಗಳಲ್ಲಿ ಕನ್ನಡಿಗರು ಸಿಕ್ಕಿಹಾಕಿಕೊಂಡಿದ್ದಾರೆ. ಹಾವೇರಿಯ ಮೂಲದ ಕುಟುಂಬವೊಂದು ಅಭುದಾಬಿಯಲ್ಲಿ ಸಿಲುಕಿಕೊಂಡಿದ್ದು, ಪ್ಲೀಸ್‌ ನಮ್ಮನ್ನು ಊರಿಗೆ ವಾಪಾಸ್‌ ಕರೆಸಿಕೊಳ್ಳಿ ಎಂದು ಮನವಿ ಮಾಡಿದೆ.

ಹಾವೇರಿಯ ಕನವಳ್ಳಿ ಗ್ರಾಮ ಮೂಲದ ಇಂಜಿನಿಯರ್‌ ರಾಘವೇಂದ್ರ ಕುದುರಿ ಕುಟುಂಬ ಅಭುದಾಬಿಯಲ್ಲಿ ಲಾಕ್‌ ಆಗಿದೆ. ಮನೆಗಳ ಮೇಲೆ ಕ್ಷಿಪಣಿ ದಾಳಿ ನಡೆಯುತ್ತಿದೆ. ಯಾವ ನಿಮಿಷದಲ್ಲಿ ಮನೆಯ ಮೇಲೆ ಏನು ಬೀಳುತ್ತದೋ ಎನ್ನುವ ಭಯದಲ್ಲಿ ಒದ್ದಾಡುತ್ತಿದ್ದೇವೆ. ಮನೆಯ ಬಾತ್‌ರೂಮ್‌ನ ಮೇಲ್ಚಾವಣಿ ಕುಸಿದು ಬಿದ್ದಿದೆ. ಬಾಗಿಲುಗಳು ಅಲ್ಲಾಡುತ್ತಿವೆ. ನಮ್ಮನ್ನು ಭಾರತಕ್ಕೆ ಕರೆಸಿಕೊಳ್ಳ ಎಂದು ಮನವಿ ಮಾಡಿದ್ದಾರೆ.

Must Read